ನಗರ ಕಾಂಗ್ರೆಸ್ ಸಮಿತಿಯಿಂದ ಸಂಭ್ರಮಾಚರಣೆ

5spt1¸
Published on

ಸೋಮವಾರಪೇಟೆ: ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಂಸದ ರಾಹುಲ್‌ಗಾಂಧಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಸಮಿತಿ ಅಧ್ಯಕ್ಷ ಎಚ್.ಎ.ನಾಗರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಇನ್ನಾದರೂ ದ್ವೇಷದ ರಾಜಕಾರಣ ನಿಲ್ಲಿಸಬೇಕು. ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಸುಪ್ರೀಂಕೋರ್ಟ್ ಇದೆ ಎಂಬುದನ್ನು ತಿಳಿದುಕೊಳ್ಳಲಿ. ಸತ್ಯಕ್ಕೆ ಜಯ ಸಿಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಸಿ.ನಾಗೇಶ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಮೇಲೆ ಪ್ರತಿಯೊಬ್ಬ ಪ್ರಜೆಯೂ ಗೌರವ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವರಿಂದ ವ್ಯವಸ್ಥೆಗೆ ಅಪಚಾರವಾಗುತ್ತಿದೆ. ಅತೀ ಚಿಕ್ಕ ಪ್ರಕರಣಕ್ಕೆ ದೊಡ್ಡಮಟ್ಟದ ಶಿಕ್ಷೆ ನೀಡಿ, ಸಂಸದ ಸ್ಥಾನ ಕಿತ್ತುಕೊಳ್ಳಲು ತಂತ್ರ ಮಾಡಿರುವುದು ಅತ್ಯಂತ ಘೋರವಾಗಿದೆ ಎಂದು ಹೇಳಿದರು.

ಕೆ.ಎ.ಯಾಕುಬ್, ಶೀಲಾ ಡಿಸೋಜ ಕೆ.ಎ.ಆದಂ, ನಗರ ಕಾಂಗ್ರೆಸ್‌ನ ಮಹಮ್ಮದ್ ಶಫಿ, ಜಮೀರ್, ಜೇಕುಬ್ ಸೈಮನ್, ಮಧುಸೂದನ್, ಸಂಧ್ಯಾಪ್ರಕಾಶ್, ಗೌರಮ್ಮ ಗುರುಮಲ್ಲಪ್ಪ, ಮೋಹನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net