

ಯಾದಗಿರಿ: ಜಿಲ್ಲೆಯಲ್ಲಿ ನಕಲಿ ಹತ್ತಿ ಬೀಜ ಮಾರಾಟ ದಂಧೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯಲ್ಲಿ ಮಾತನಾಡಿ, ಪ್ರತಿವರ್ಷ ಮುಂಗಾರು ಸಂದರ್ಭದಲ್ಲಿ ನಕಲಿ ಬೀಜ ಮಾರಲಾಗುತ್ತಿದೆ. ಈ ಜಾಲಕ್ಕೆ ಮುಗ್ಧ ರೈತರು ಬಲಿಯಾಗುತ್ತಿದ್ದಾರೆ. ಇದರಿಂದ ನಮಗೂ ಮತ್ತು ಸಕರ್ಾರಕ್ಕೂ ಕೆಟ್ಟ ಹೆಸರು ಬರುತ್ತಿದೆ. ಅಕಾರಿಗಳು ಕೇವಲ ಕೇಸ್ ದಾಖಲಿಸಿದರೆ ಸಾಲದು, ದಂಧೆ ನಿಯಂತ್ರಣಕ್ಕೆ ಕಠಿಣ ಹೆಜ್ಜೆ ಇರಿಸಬೇಕು ಎಂದು ತಾಕೀತು ಮಾಡಿದರು.
ಸಚಿವರ ಮಾತಿಗೆ ದನಿಗೂಡಿಸಿದ ಶಾಸಕ ಶರಣಗೌಡ ಕಂದಕೂರ, ಗುರುಮಠಕಲ್ ಪಟ್ಟಣದಲ್ಲಿ ಪ್ರತಿವಾರ ತೆಲಂಗಾಣ ಪೊಲೀಸರು ನಕಲಿ ಬೀಜ ಮಾರಾಟಗಾರರನ್ನು ಬಂಸುತ್ತಿದ್ದಾರೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದು ಜಂಟಿ ಕೃಷಿ ನಿದರ್ೇಶಕ ಎಸ್.ಎಸ್. ಅಬೀದ್ ಅವರನ್ನು ಪ್ರಶ್ನಿಸಿದರು.
ಸಾಲದ ಹೊರೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಕರ್ಾರದಿಂದ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಮೊದಲೇ ಮೃತರನ್ನು ಕಳೆದುಕೊಂಡ ಕುಟುಂಬಸ್ಥರು ಪರಿಹಾರಕ್ಕಾಗಿ ನಿಮ್ಮ ಕಚೇರಿಗಳಿಗೆ ಅಲೆಯಬೇಕಾ? ತಿರಸ್ಕೃತ ಅಜರ್ಿಗಳ ಬಗ್ಗೆ ನಮಗೆ ಮಾಹಿತಿ ಸಹ ಕೊಡುವುದಿಲ್ಲ. ರಿಜಕ್ಟ್ ಆದ ಬಗ್ಗೆ ಸಂಬಂಸಿದ ಶಾಸಕರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡುವಂತೆ ಸಚಿವರು ನಿದರ್ೇಶಿಸಿದರು.
ತೋಟಗಾರಿಕೆ ಬೆಳೆಗಳಿಗೆ ಸಬ್ಸಿಡಿ ಸೌಲಭ್ಯದ ಬಗ್ಗೆ ರೈತರಲ್ಲಿ ಜಾಗೃತಿ ಕೊರತೆ ಇದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸುರಪುರ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಅರ್ಧಕ್ಕೆ ನಿಂತಿದೆ. ರಂಗಂಪೇಟದಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದ್ದು, ಕೂಡಲೇ ಗಮನ ಹರಿಸಬೇಕು ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಸೂಚಿಸಿದರು.
ಗುರುಮಠಕಲ್ನಲ್ಲಿ ವಾರದಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೋಳ ತಿಳಿಸಿದರು. ಇದರಿಂದ ಕೆಂಡಾಮಂಡಲರಾದ ಶಾಸಕ ಕಂದಕೂರ, ನಮ್ಮ ತಂದೆ ಐದು ವರ್ಷ ಶಾಸಕರಿದ್ದಾಗಲೂ ಇದೇ ಹೇಳಿದ್ದೀರಿ. ಈಗಲೂ ಅದೇ ಮಾತನಾಡುತ್ತಿದ್ದೀರಿ. ಜನತೆಗೆ ನೀರು ಕೊಡಲು ಆಗದಿದ್ದರೆ ಸುಮ್ಮನೆ ಯಾಕೆ ಮಾತಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ನಗರೋತ್ಥಾನ ಯೋಜನೆಯಡಿ ಅನುದಾನವಿದ್ದರೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿ ಎಂದು ಸಚಿವ ದರ್ಶನಾಪುರ ನಿದರ್ೇಶನ ನೀಡಿದರು.
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ. ವೇದಮೂತರ್ಿ, ಜಿಪಂ ಸಿಇಒ ಗರೀಮಾ ಪನ್ವಾರ್ ಇದ್ದರು.