ನಕಲಿ ಸೀಲು, ನಕಲಿ ಸಹಿ ಬಳಕೆ-ಪತ್ರ ಬರಹಗಾರನ ಸೆರೆ

IMG_20231110_064218.jpg
Published on

ದಾವಣಗೆರೆ: ಆಧಾರ್ ವಿಳಾಸ, ವಯಸ್ಸಿನ ತಿದ್ದುಪಡಿಯ ಅರ್ಜಿ ನಮೂನೆಯಲ್ಲಿ ಪತ್ರಾಂಕಿತ ಅಧಿಕಾರಿ ಹೆಸರಿನಲ್ಲಿ ನಕಲಿ ಸೀಲು ಸೃಷ್ಟಿಸಿ, ನಕಲಿ ಸಹಿ ಮಾಡುತ್ತಿದ್ದ ಪತ್ರ ಬರಹಗಾರರೊಬ್ಬರನ್ನು ಬಸವನಗರ ಠಾಣೆ ಪೊಲೀಸರು ಬಂಧಿಸಿದ್ದು ನಕಲಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಸದ್ಯೋಜಾತಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ, ಪುಟಗನಾಳ್ ಗ್ರಾಮ ವಾಸಿ ಬಸವರಾಜಪ್ಪ ಎಂಬ ಪತ್ರ ಬರಹಗಾರರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ. ಆಧಾರ್ ತಿದ್ದುಪಡಿ ಸಂಬಂಧ ಗ್ರಾಹಕರು ಸಲ್ಲಿಸುವ ಅರ್ಜಿ ನಮೂನೆಯಲ್ಲಿ ಪತ್ರಾಂಕಿತ ಅಧಿಕಾರಿ ದೃಢೀಕರಣ ಸಹಿ ಮಾಡಬೇಕು. ದಾವಣಗೆರೆ ಅಂಚೆ ಕಚೇರಿ ಮುಂಭಾಗದಲ್ಲಿ ನಾನೇ ಪತ್ರಾಂಕಿತ ಅಧಿಕಾರಿ ಎಂದು ಹಿರಿಯ ತಜ್ಞರು. ಸಿ.ಜಿ.ಎಚ್. ದಾವಣಗೆರೆ ಎಂಬ ಹೆಸರಿನಡಿ ನಕಲಿ ಸೀಲನ್ನು ಸೃಷ್ಟಿಸಿ ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಸವನಗರ ಪೊಲೀಸ್ ನಿರೀಕ್ಷಕ ಎಚ್. ಗುರುಬಸವರಾಜ ನೇತೃತ್ವದಲ್ಲಿ ಪಿಎಸ್‌ಐ ಜಿ. ನಾಗರಾಜ, ಎಎಸ್‌ಐ ಮಹಮ್ಮದ್ ರಫಿ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ. ---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net