ನಕಲಿ ಷೇರು ಮಾರುಕಟ್ಟೆ ವೆಬ್‌ಸೈಟ್‌ಗಳಿಗೆ ಮಾರು ಹೋದ ಲಕ್ಷಂತರ ರೂ ಮೊಸ

ನಕಲಿ ಷೇರು ಮಾರುಕಟ್ಟೆ ವೆಬ್‌ಸೈಟ್‌ಗಳಿಗೆ ಮಾರು ಹೋದ ಲಕ್ಷಂತರ ರೂ ಮೊಸ
Published on

ಬೇಲೂರು : ವಾಟ್ಸಾಪ್‌ನಲ್ಲಿ ಬಂದ ನಕಲಿ ಷೇರು ಮಾರುಕಟ್ಟೆ ವೆಬ್‌ಸೈಟ್‌ಗಳಿಗೆ ಮಾರು ಹೋದ ವ್ಯಕ್ತಿಯೊಬ್ಬರು 15.15 ಲಕ್ಷ ರೂ. ಕಳೆದುಕೊಂಡಿರುವ ಘಟನೆ ತಾಲ್ಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.
ಅರೇಹಳ್ಳಿಯ ಹೊಸಪೇಟೆ ಬೀದಿ ನಿವಾಸಿ ಮೊಹಮ್ಮದ್ ಶಾಕೀರ್ ಹುಸೇನ್ ಅವರು ಲಾಭದ ಆಸೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಮೊಹಮ್ಮದ್ ಅವರು ಕಳೆದ 1 ವರ್ಷದಿಂದ ಷೇರು ಮಾರುಕಟ್ಟೆ ಬಗ್ಗೆ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಮತ್ತು ವೆಬ್ ಸೈಟ್‌ಗಳಲ್ಲಿ ಪರಿಶೀಲನೆ ನಡೆಸುತ್ತಿದ್ದರು. 2024ರ
ಏ 2 ರಂದು ಆನ್‌ಲೈನ್‌ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಗಿ 3 ಕಂಪನಿಯ ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಮೊಹಮ್ಮದ್ ಅವರ ನಂಬರ್ ಸೇರಿಸಿದ್ದಾರೆ. ನಂತರ ಮಾರ್ಕೆಟ್ ಮಾಡುವ ಬಗ್ಗೆ ತಿಳಿಸಿದ್ದು, ಷೇರುಗಳನ್ನು ಖರೀದಿ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಶ್ರೀಮಂತ ಆಗಬೇಕೆಂಬ ಆಸೆಗೆ ಬಿದ್ದ ಮೊಮ್ಮದ್ ಅವರು ಏ. 19 ರಂದು ಇಂಡ್‌ಸ್‌ಇಂಡ್ ಬಾಂಕ್,ಪಂಜಾಬ್ ನ್ಯಾಷಿನಲ್ ಬ್ಯಾಂಕ್,ಉಜ್ಜೀವನ್ ಬ್ಯಾಂಕ್ ಸೇರಿ 15.15 ಲಕ್ಷ ರೂ. ಹಣ ಪಾವತಿಸಿದ್ದಾರೆ. ನಂತರ ಹಣ ವಾಪಾಸ್ ಬಾರದೆ ಇದ್ದಾಗ ಮೋಸ ಹೋಗಿರುವುದನ್ನು ಅರಿತಿದ್ದಾರೆ. ಈ ಬಗ್ಗೆ ಅರೇಹಳ್ಳಿ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net