

ಕಲಬುರಗಿ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಬೇಕು, ಕೆಪಿಎಂಇ ಕಾಯ್ದೆ ಪ್ರಕಾರ ನಿಯಮ ಪಾಲಿಸದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಕಡ್ಡಾಯವಾಗಿ ಕೆಪಿಎಂಇ ನೋಂದಣಿ ಸಂಖ್ಯಾಫಲಕ ಹಾಕಬೇಕು, ಅಲೋಪಥಿ, ಆಯುರ್ವೇದಿಕ ಆಸ್ಪತ್ರೆಗಳ ಪ್ರತ್ಯೇಕ ಬಣ್ಣದ ಫಲಕ ಇರಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಪಿಡುಗಾಗಿರುವ ನಕಲಿ ವೈದ್ಯರ ಹಾವಳಿ ನಿಯಂತ್ರಿಸಬೇಕು, ತಾಲೂಕು ಮಟ್ಟದಲ್ಲಿ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ತಪಾಸಣೆಗೆ ವೇಗ ನೀಡಬೇಕು ಎಂದು ಆಗ್ರಹಿಸಿದರು.
ಸೇನೆ ವಿಭಾಗಾಧ್ಯಕ್ಷ ಪ್ರವೀಣ ಕಟ್ಟಿಮನಿ, ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ, ಪ್ರಮುಖರಾದ ಶಿವಕುಮಾರ ನಾಸಿ, ಉಪಾಧ್ಯಕ್ಷ ಆಸೀಫ್ ನಿಂಬಾಳ್ಕರ್, ಅಶೋಕ ಭೀಮಳ್ಳಿ, ಸಿದ್ಧಲಿಂಗ ರಾಠೋಡ, ಸೂರ್ಯಕಾಂತ ಪಂಚಾಳ, ಸಾಯಿಕುಮಾರ ಭಜಂತ್ರಿ ಇತರರಿದ್ದರು.