ನಕಲಿ ವೈದ್ಯರ ಪತ್ತೆಹಚ್ಚಿ ದೂರು ದಾಖಲಿಸಿ

Oplus_131072
Oplus_131072
Published on

ಯಾದಗಿರಿ: ಜಿ¯್ಲೆಯಲ್ಲಿನ ನಕಲಿ ವೈದ್ಯರ ಹಾಗೂ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲï ಪ್ರಕರಣ ದಾಖಲಿಸುವಂತೆ ಜಿ¯್ಲÁಧಿಕಾರಿ ಡಾ.ಸುಶೀಲಾ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿ¯್ಲÁಧಿಕಾರಿಗಳ ಕಚೇರಿಯಲ್ಲಿ ಬುಧವಾರ ಪಿಸಿಪಿಎನ್‌ಡಿಟಿ ಹಾಗೂ ಕೆಪಿಎಂಇ ಕಾಯ್ದೆಯಡಿ ಕೋರಿ ಬಂದಿರುವ ಅರ್ಜಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ವೈದ್ಯಕೀಯ ಪದವಿಗಳಿಲ್ಲದೇ ನಕಲಿ ವೈದ್ಯರಿಂದ ಚಿಕಿತ್ಸೆಗೆ ಒಳಗಾಗಿ ಬಡ ಜನರ ಜೀವಕ್ಕೆ ಅಪಾಯವಾಗಬಾರದು. ಜಿ¯್ಲÉಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ತಾಂಡಾದ ಮುಗ್ದ ಜನರಿಗೆ ಮತ್ತು ಜಿ¯್ಲÉಯ ಬಡ ಜನರಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕು. ನೊಂದಾಯಿತವಲ್ಲದ ಆಸ್ಪತ್ರೆ ಹಾಗೂ ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲï ಪ್ರಕರಣ ದಾಖಲಿಸುವಂತೆ ಅವರು ತಾಕೀತು ಮಾಡಿದರು.

ಜಿ¯್ಲÉಯಲ್ಲಿನ ಅಧಿಕೃತ ಹಾಗೂ ಅನಧಿಕೃತ ಆಸ್ಪತ್ರೆಗಳ ಪರಿಶೀಲನೆಗಾಗಿ, ಅನಿರೀಕ್ಷಿತವಾಗಿ ತಂಡದೊAದಿಗೆ ಭೇಟಿ ನೀಡುವಂತಾಗಬೇಕು. ಸಾರ್ವಜನಿಕ ದೂರುಗಳ ಜತೆಗೆ ಸಂಬAಧಿಸಿದ ಆರೋಗ್ಯ ಅಧಿಕಾರಿಗಳು ತಂಡದೊAದಿಗೆ ಭೇಟಿ ನೀಡಿ ಪರಿಶೀಲಿಸಬೇಕು. ವೈದ್ಯಕೀಯ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿವೆಯೇ? ಎಂಬುದರ ಬಗ್ಗೆ ನಿಗಾವಹಿಸಲು ಪೋಲಿಸ್ ಹಾಗೂ ಆರೋಗ್ಯ ಅಧಿಕಾರಿಗಳು ಒಳಗೊಂಡ ತಂಡವೊAದು ರಚಿಸಿಕೊಳ್ಳುವಂತೆ ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹೇಳಿದರು.

ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯಡಿ, ಅನಧಿಕೃತವಾಗಿ ಅಲ್ಟಾçಸೋನೋಗ್ರಾಫಿ ಮಶೀನ್ ಬಳಸುವುದಾಗಲಿ, ಆಸ್ಪತ್ರೆ ನಡೆಸುವುದಾಗಲಿ ಶಿಕ್ಷಾರ್ಹ ಅಪರಾಧ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ನಕಲಿ ವೈದ್ಯರ ಬಳಿ ಹೋಗದಂತೆಯೂ ಸೂಕ್ತ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಅನುಕೂಲವಾಗುವಂತೆ ಜಿ¯್ಲÉಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಜನತೆಗೆ ಸೇವೆ ಕಲ್ಪಿಸುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಹಣುಮಂತರೆಡ್ಡಿ,ಡಾ.ರಮೇಶ, ಸರ್ಕಾರಿ ರೇಡಿಯಾಲಾಜಿಸ್ಟ ಡಾ.ಶಾಂತಲಾ, ಹಿರಿಯ ಆರೋಗ್ಯ ನಿರೀP್ಷÀಣಾಧಿಕಾರಿ ಸೂಗೂರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net