ನಕಲಿ ಬೇಡ ಜಂಗಮರ ವಿರುದ್ಧ ಪ್ರತಿಭಟನೆ ೧೮ಕ್ಕೆ

Arjun Bhadre
Published on

ಕಲಬುರಗಿ: ಸಮಾಜದಲ್ಲಿ ಉನ್ನತ ಜಾತಿಯಲ್ಲಿದ್ದು, ಗೌರವಕ್ಕೆ ಪಾತ್ರರಾದ ವೀರಶೈವ ಲಿಂಗಾಯತದ ಜಂಗಮರು ಬೇಡ, ಬುಡ್ಗ ಜಂಗಮ ಜಾತಿಗೆ ಸೇರಿದ್ದೇವೆಂದು ಎಸ್ಸಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ಖಂಡಿಸಿ ನಗರದಲ್ಲಿ ಜು.೧೮ರಂದು ಮಧ್ಯಾಹ್ನ ೧೨ಕ್ಕೆ ಬೃಹತ್​ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸರ‍್ಷ ಸಮಿತಿ ಸಂಚಾಲಕ ಅರ್ಜುನ ಭದ್ರೆ ತಿಳಿಸಿದರು.

ರಾಜ್ಯದಲ್ಲಿ ಲಿಂಗಾಯತ ಜಂಗಮರು ಬೇರೆ, ಬೇಡ ಜಂಗಮರು ಬೇರೆ ಎಂದು ಹೈಕರ‍್ಟ್​ ತರ‍್ಪು ನೀಡಿದೆ. ಜಾತಿ ಹೆಸರು ಒಂದೇ ಇದ್ದರೂ ಪರಿಶಿಷ್ಟ ಜಾತಿಗಳ ಸೌಲಭ್ಯ ನೀಡಬಾರದು ಎಂದು ಸುಪ್ರೀಂ ಕರ‍್ಟ್​ ತರ‍್ಪು ನೀಡಿದೆ. ಆದರೆ ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀೆಯಲ್ಲಿ ಲಿಂಗಾಯತ ಜಂಗಮರು ಎಸ್ಸಿಯಲ್ಲಿನ ಬೇಡ ಜಂಗಮರೆಂದು ನಮೂದಿಸಿದ್ದು, ಅವರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಕಲಿ ಜಾತಿ ಪ್ರಮಾಣ ಪತ್ರ ಪಡೆದವರು, ಪತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಾ.ರವೀಂದ್ರನಾಥ ವರದಿ ಆಧಾರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ೧೦೯೭ ವಿರುದ್ಧ, ಅದನ್ನು ನೀಡಿದ ತಹಸೀಲ್ದಾರ್​ ವಿರುದ್ಧ ಜರುಗಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ, ಜಾಗೃತಿ ಮೂಡಿಸಲು ನಗರದ ಜಗತ್​ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಲ್ಲಿಕಾರ್ಜುನ ಖನ್ನಾ, ಸರ‍್ಯಕಾಂತ ಅಜಾದಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net