

ನಿಪ್ಪಾಣಿ: ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಪತ್ರಿಕೋದ್ಯಮಕ್ಕೆ ಸಂಬಧವಿಲ್ಲದ ಹೆಚ್ಚು ಜನರು ತಮ್ಮ ವಾಹನಗಳ ಮೇಲೆ ಪ್ರೆಸ್ ಎಂದು ಬರೆದುಕೊಂಡು ಓಡಾಡುತ್ತಿದ್ದಾರೆ. ನಕಲಿ ಪತ್ರಕರ್ತರ ವಿರುದ್ಧ ತಾಲೂಕಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಮೋಲ ನಾಗರಾಳೆ ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ತಹಸೀಲ್ದಾರ್ ಮುಜಫರ್ ಬಳಿಗಾರಗೆ ಮನವಿ ಸಲ್ಲಿಸಿ ಮಾತನಾಡಿ, ಪತ್ರಕರ್ತರೆಂದು ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳು ಹಾಗೂ ನೌಕರರಿಗೆ ಬೆದರಿಕೆ ಹಾಕುವ ಯತ್ನ ಮಾಡುತ್ತಿದ್ದಾರೆ. ಇಂತಹ ನಕಲಿ, ಅಕ್ರಮ ಪತ್ರಕರ್ತರಿಗೆ ಕಡಿವಾಣ ಹಾಕಬೇಕು ಎಂದರು.
ತಹಸೀಲ್ದಾರ್ ಮುಜಫರ್ ಬಳಿಗಾರ ಮನವಿ ಸ್ವೀಕರಿಸಿ ಮಾತನಾಡಿ, ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.
ಸಂಘದ ಸಚಿವ ರಾಹುಲ ಪಾಟೀಲ, ಹಿರಿಯ ಪತ್ರಕರ್ತ ರಾಜೇಶ ಶೇಡಗೆ, ಮಹೇಶ ಶಿಂಪುಕಡೆ, ಮಧುಕರ ಪಾಟೀಲ, ವಿಠ್ಠಲ ಕೇಸರಕರ, ಇನಾಯತ್ ಶಿರಕೋಳಿ, ಸೋಮನಾಥ ಖೋತ, ಅಶ್ವಿನ ಅಮ್ಮಣಗಿ, ಸುನೀಲ ವಾರಕೆ ಇತರರಿದ್ದರು.