ನಕಲಿ ದಾಖಲೆ ಸೃಷ್ಟಿ ಮಾಡಿಕೊಟ್ಟಿರುವರ ವಿರುದ್ಧ ಕಠಿಣ ಕ್ರಮ ಒತ್ತಾಯ

ನಕಲಿ ದಾಖಲೆ ಸೃಷ್ಟಿ ಮಾಡಿಕೊಟ್ಟಿರುವರ ವಿರುದ್ಧ ಕಠಿಣ ಕ್ರಮ ಒತ್ತಾಯ
Published on

ಹಾಸನ: ಬಾಂಗ್ಲಾ ನುಸುಳುಕೋರರನ್ನು ಗುರುತಿಸಿ ಹೊರ ಹಾಕುವ ಮೂಲಕ ನಕಲಿ ದಾಖಲೆ ಸೃಷ್ಟಿ ಮಾಡಿಕೊಟ್ಟಿರುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಎಬಿವಿಪಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಎಬಿವಿಪಿ ಆಂತರಿಕ ಸಮೀಕ್ಷೆ ಪ್ರಕಾರ ಬಾಂಗ್ಲಾದೇಶದ ನುಸುಳುಕೋರರು ಜಿಲ್ಲಾದ್ಯಂತ 5,000 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಅವರಿಗೆ ಸ್ಥಳೀಯರು ಸಹಕಾರ ನೀಡುವ ಜೊತೆಗೆ ಸರ್ಕಾರಿ ನೌಕರರೇ ಆಧಾರ್‌ಕಾರ್ಡ್ ನಂತರ ಮಹತ್ವದ ದಾಖಲೆಯನ್ನು ಸೃಷ್ಟಿಸಿಕೊಡುತ್ತಿರುವುದು ದುರಾದೃಷ್ಟಕರ ಸಂಗತಿ. ಇಂತಹ ದೇಶದ್ರೋಹ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಅವರಿಗೆ ಸಹಕರಿಸುತ್ತಿರುವ ಸ್ಥಳೀಯರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿ ಶಿಕ್ಷಿಸಬೇಕೆಂದು ಒತ್ತಾಯಿಸಿ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಹ ಸಂಚಾಲಕ ಭರತ್, ನಗರ ಸಹ ಕಾರ್ಯದರ್ಶಿ ಜ್ಞಾನ, ಕಾರ್ಯಕರ್ತರಾದ ಮನೋಜ್, ಅದಿತಿ, ಅಖಿಲೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net