ನಕಲಿ ಜಾತಿ ಪ್ರಮಾಣಪತ್ರಕ್ಕೆ ತಡೆಯೊಡ್ಡಿ

07-08-Shiva-4
ಮೋಗವೀರ ಜನಾಂಗದವರು ಮೊಗೇರಾ ಹೆಸರಿನಲ್ಲಿ ಎಸ್ಸಿ ಪ್ರಮಾಣಪತ್ರ ಪಡೆಯುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಬಹುಜನ ಸಂಘರ್ಷ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ನರಸಿಂಹ ಗಧಾರ, ಪದಾಕಾರಿಗಳಾದ ರವಿಕುಮಾರ ಕುರ್ಡಿ, ಸಾಗರ, ಪ್ರಸಾದ ಭಂಡಾರಿ, ಈರಣ್ಣ ಚಲುವಾದಿ ಇದ್ದರು.
Published on

ರಾಯಚೂರು: ಮೋಗವೀರ ಜನಾಂಗದವರು ಮೋಗೆರಾ ಜನಾಂಗವೆಂದು ಜಾತಿ ಪ್ರಮಾಣ ಪಡೆದು ಮೀಸಲಾತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಯಬೇಕು ಎಂದು ಬಹುಜನ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಸಮಿತಿ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಸೋಮವಾರ ಮನವಿ ಸಲ್ಲಿಸಿ, ಮೋಗವೀರ ಜನಾಂದವರು ಮೋಗೆರಾ ಎಂದು ಜಾತಿ ಪ್ರಮಾಣ ಪಡೆಯುವ ಹುನ್ನಾರ ನಡೆಸಿದ್ದು, ಸರ್ಕಾರ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರ ಮತ್ತು ಕೊಳ್ಳಗಾಲ ಪ್ರದೇಶದಲ್ಲಿ ವಾಸಿಸುವ ಮೋಗೆರಾ ಜಾತಿಯವರ ಕುಲವೃತ್ತಿ ಮೊ ಬೇಟೆಯಾಡುವುದಾಗಿದೆ. ಮೈಸೂರು ಮಹಾರಾಜರ ಅವಯಲ್ಲಿ ಅವರನ್ನು ಹಿಂದುಳಿದ ಸಮಾಜವೆಂದು ಗುರುತಿಸಿ ಎಸ್ಸಿ ಪಟ್ಟಿಗೆ ಸೇರಿಸಲಾಗಿತ್ತು.
ಆದರೆ ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದಲ್ಲಿ ವಾಸಿರುವ ಮೀನು ಹಿಡಿಯುವ ವೃತ್ತಿ ಮಾಡುವ ಮೋಗವೀರಾ ಜನಾಂಗದವರು ಮೊಗೇರಾ ಎಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕೂಡಲೇ ಅಕಾರಿಗಳಿಗೆ ಸುಳ್ಳು ಜಾತಿ ಪ್ರಮಾಣಪತ್ರ ನೀಡದಂತೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ನರಸಿಂಹ ಗಧಾರ, ಪದಾಕಾರಿಗಳಾದ ರವಿಕುಮಾರ ಕುರ್ಡಿ, ಸಾಗರ, ಪ್ರಸಾದ ಭಂಡಾರಿ, ಈರಣ್ಣ ಚಲುವಾದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net