ನಕಲಿ ಆಧಾರ್ ಕಾರ್ಡ್ : ರಾಷ್ಟ್ರೀಯ ತನಿಖಾ ದಳದಿಂದ ತನಿಖೆಗೆ ಒತ್ತಾಯ

ನಕಲಿ ಆಧಾರ್ ಕಾರ್ಡ್ : ರಾಷ್ಟ್ರೀಯ ತನಿಖಾ ದಳದಿಂದ ತನಿಖೆಗೆ ಒತ್ತಾಯ
Published on

ಹಾಸನ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದಲೇ ಬಾಂಗ್ಲಾದೇಶದಿಂದ ಬರುವ ವಲಸಿಗರಿಗೆ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದು, ಇದರ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಸೂಕ್ತ ತನಿಖೆಯಾಗಬೇಕು ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಒತ್ತಾಯಿಸಿದರು.
ಡಿಸಿ ಕಚೇರಿ ಆವರಣದಲ್ಲಿ ಆಧಾರ್ ಕಾರ್ಡ್ ನಕಲಿ ಮಾಡುತ್ತಿರುವ ಬಗ್ಗೆ ಬೆಂಗಳೂರಿನಿಂದ ತಂಡ ಬಂದು ಪತ್ತೆ ಮಾಡಿದೆ. ಇದು ಅತ್ಯಂತ ಆತಂಕದ ವಿಚಾರ, ಇದನ್ನ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸವೇಕು. ಪುಡಿಗಾಸಿಗಾಗಿ ದೇಶದ್ರೋಹದ ಕೆಲಸ ಮಾಡಿರುವ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೋಮಾವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಮಾಡುತ್ತಿರುವ ದೊಡ್ಡ ಜಾಲವೇ ಇದ್ದು, ಇದನ್ನ ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯೆಗೊಂಡಿದೆ. ಈ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಅರಸೀಕೆರೆ ಕ್ಷೇತ್ರದಲ್ಲಿ 3000ಕ್ಕೂ ಹೆಚ್ಚು ಜನರು ಅಕ್ರಮವಾಗಿ ಬೇರೆ ಕಡೆಯಿಂದ ಬಂದು ಮತದಾನದ ಹಕ್ಕನ್ನ ಪಡೆದಿದ್ದಾರೆ. ಈ ಬಗ್ಗೆ ದೂರು ನೀಡಿದ್ದಾರು ಬಗ್ಗೆ ಕ್ರಮ ಕೈಗೊಂಡಿರಲಿಲ್ಲ, ಇದೇ ರೀತಿ ಮುಂದುವರೆದರೆ ಬಾಂಗ್ಲಾದೇಶದಲ್ಲಿ ಆಗಿರುವಂತಹ ಆ ಘಟನೆಗಳು, ಹಾಸನ ಮತ್ತು ಇಡೀ ರಾಜ್ಯದಲ್ಲಿ ಆಗುವುದರಲ್ಲಿ ಯಾವುದೇ ರೀತಿ ಸಂಶಯವಿಲ್ಲ ಆದ್ದರಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶದ ಮುಸ್ಲಿಂ ಧರ್ಮಗುರು 9 ವರ್ಷಗಳ ಕಾಲ ನಗರದಲ್ಲಿ ಅರಸಿಕೆರೆಯ ಮಸೀದಿಯಲ್ಲಿ ವಾಸವಾಗಿದ್ದರು. ಇದೇ ರೀತಿ ಬೇರೆ ಕಡೆಯಿಂದ ಬಂದು ನಗರದಲ್ಲಿ ಹಲವು ಮುಸ್ಲಂ ಏರಿಯಗಳಲ್ಲಿ ವಾಸವಾಗಿದ್ದಾರೆ ಎಂದು ಆರೋಪಿಸಿದರು.
ಅರಸೀಕೆರೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ವಿಪ್ ಉಲ್ಲಂಘನೆ ಮಾಡಿ ಅಧ್ಯಕ್ಷರಾಗಿರುವ ವ್ಯಕ್ತಿ ಹಾಗೂ ಇನ್ನಿತರ ಸದಸ್ಯರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲು ದೂರು ನೀಡಲಾಗಿದ್ದು, ಡಿಸಿ ತನಿಖೆ ನಡೆಸಿ 30 ದಿನಗಳ ಒಳಗೆ ತೀರ್ಪು ನೀಡಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡಬಾರದು, ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಉಪ ವಿಭಾಗ ಅಧಿಕಾರಿಗಳು ದಾಖಲೆ ನೀಡಲು 4 ದಿನಗಳ ಕಾಲ ಸತಾಯಿಸಿದ್ದಾರೆ. ವಿಫ್ ಉಲ್ಲಂಘನೆಯಾಗಿದ್ದು ಅದರ ವಿರುದ್ಧ ಕ್ರಮ ಕೈಗೊಂಡು ಅನರ್ಹತೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇದರ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಿವುಲ್ಲಾ, ನಮ್ಮ ಪಕ್ಷದಲ್ಲಿ ಇಲ್ಲ ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಶಾಸಕರ ಆಪ್ತರು ಈಗ ಗೆದ್ದ ನಂತರ ರೇವಣ್ಣ ಮತ್ತು ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರು ಹೇಳಲು ಇವರಿಗೆ ನೈತಿಕತೆ ಇಲ್ಲ, ಪಕ್ಷದ ಸಭೆಗೆ ಭಾಗವಹಿಸದೆ ಈಗ ನಾವು ಜೆಡಿಎಸ್ ಪಕ್ಷದವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಸ್ವಾಮಿ, ಉಮೇಶ್, ಮಹೇಶ್ ಇದ್ದರು.

2010ರಂತೆ ಮೆರವಣಗೆ ನಡೆಯಲಿ:
ರಾಜ್ಯದಲ್ಲಿ ಅರಸೀಕೆರೆ ಪೆಂಡಾಲ್ ಗಣಪತಿ ಪ್ರಸಿದ್ಧಿ ಹೊಂದಿದ್ದು, 2010ಲ್ಲಿ ಯಾವ ರೀತಿ ನಗರದಲ್ಲಿ ಗಣೇಶ ಮೂರ್ತಿಯ ಮೆರವಣೆಗೆ ಸಾಗುತ್ತಿತ್ತು. ಅದೇ ರೀತಿ ಈ ಬಾರಿಯು ಕೂಡ ಮೆರವಣಗೆ ಸಾಗಬೇಕು. ಈ ಬಗ್ಗೆ ಸ್ಥಳೀಯ ಜನಪ್ರತಿ ನಿಧಿಗಳು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net