ನಂಬಿಸಿ 2.77 ಲಕ್ಷ ರೂ. ಮೋಸ

crime
Published on

ಮೈಸೂರು: ಕಡಿಮೆ ಬೆಲೆಗೆ ಗೃಹಯೋಪಯೋಗಿ ವಸ್ತುಗಳನ್ನು ಕೊಡಿಸುವುದಾಗಿ ನಂಬಿಸಿ 2.77 ಲಕ್ಷ ರೂ. ಪಡೆದು ಮೋಸ ಮಾಡಿರುವುದು ವರದಿಯಾಗಿದೆ.

ಸಿದ್ಧಾರ್ಥನಗರದ ನಿವಾಸಿ ಎಂ.ಎಸ್.ಸಂತೋಷ್‌ಕುಮಾರ್ ಮೋಸ ಹೋದವರು. ಮೊಬೈಲ್ ಮೂಲಕ ಸಂಪರ್ಕಿಸಿರುವ ಆರೋಪಿ, ಹಳೆಯ ವಿದ್ಯಾರ್ಥಿ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾನೆ.

ಕಸ್ಟಮ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಕಡಿಮೆ ಬೆಲೆಗೆ ಗೃಹಬಳಕೆ ವಸ್ತುಗಳನ್ನು ಕೊಂಡಿಸುವೆನೆಂದು ಹೇಳಿಕೊಂಡಿದ್ದು, ಅದಕ್ಕಾಗಿ ಮುಂಗಡವಾಗಿ ಹಣ ಪಡೆದುಕೊಂಡಿದ್ದಾನೆ. ಬಳಿಕ ಮೋಸ ಮಾಡಿದ್ದಾನೆ. ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net