ನಂಬರ್ ಪ್ಲೇಟ್ ಮೇಲೆ ‘ಸ್ಮೈಲ್-ಲೈಪ್’

h14-Number Plate
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ ಹು-ಧಾ ಅವಳಿ ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ದಂಡ ವಿಧಿಸುತ್ತಿದ್ದಾರೆ. ಇದರ ಮಧ್ಯೆ ನಗರದ ಕಾಡಸಿದ್ದೇಶ್ವರ ಕಾಲೇಜ್ ಮುಂಭಾಗದ ಸಿಗ್ನಲ್ ಬಳಿ ವ್ಯಕ್ತಿಯೊಬ್ಬರು, ನಂಬರ್ ಪ್ಲೇಟ್ ಇಲ್ಲದ ವಾಹನ ಚಲಾಯಿಸಿಕೊಂಡು ಹೋಗಿದ್ದು, ಪೊಲೀಸ್ ಇಲಾಖೆಗೆ ದಂಗು ಬಡಿಸುವಂತೆ ಮಾಡಿದ್ದಾರೆ. ಯಾಕೆಂದರೆ ಅವರು ಖಾಕಿ ಪ್ಯಾಂಟ್ ಧರಿಸಿರುವುದರಿಂದ ಯಾರಿರಬಹುದು ? ಎಂಬ ಕುತೂಹಲ ಮೂಡಿದೆ.

ನಂಬರ್ ಪ್ಲೇಟ್ ಮೇಲೆ ಸಂಖ್ಯೆ ನಮೂದಿಸುವ ಬದಲು ‘ಯುವರ್ ಸ್ಮೈಲ್ ಇಸ್ ಮೈ ಹ್ಯಾಪಿನೆಸ್ ಬಟ್ ಯುವರ್ ಹ್ಯಾಪಿನೆಸ್ ಇಸ್ ಮೈ ಲೈಫ್’ ಎಂದು ಬರೆದುಕೊಂಡಿದ್ದಾರೆ. ಅಲ್ಲಿಯೇ ಪೊಲೀಸರು ಬೀಡು ಬಿಟ್ಟಿದ್ದರೂ ಇದನ್ನು ಗಮನಿಸದೇ ಇರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net