

ಕಲಬುರಗಿ: ನಂದೂರು(ಕೆ) ಗ್ರಾಮದಲ್ಲಿ ಸೋಮವಾರ ಹಗಲು ಹೊತ್ತಿನಲ್ಲೇ ಮನೆ ಕಳ್ಳತನವಾಗಿದೆ. ನಂದೂರ ಕೆ ಗ್ರಾಮದ ಯಲ್ಲಾಲಿಂಗ ಭೀಮಶಾ ಅವರ ಮನೆಯಲ್ಲಿ ೯ ಗ್ರಾಂ ಬಂಗಾರದ ಬೋರಮಾಳ, ೭ ಗ್ರಾಂ ಜೀರಾಮಣಿ, ೫ ಗ್ರಾಂ ಸುತ್ತುಂಗುರ, ೩ ಗ್ರಾಂ ಕಿವಿಯೋಲೆ, ೨ ಗ್ರಾಂ ಬಂಗಾರದ ಉಂಗುರ, ೫ ಗ್ರಾಂ ಬೆಳ್ಳಿ ಕಡಗ, ೫ ತೊಲೆ ಕಾಲು ಚೈನಾ, ೨ ತೊಲೆ ಬೆಳ್ಳಿ ಉಡದಾರ, ೨ ಲಕ್ಷ ರೂ. ನಗದು ಸೇರಿ ಒಟ್ಟು ೩.೩೬ ಲಕ್ಷ ರೂ. ವೌಲ್ಯದ ವಸ್ತು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.