

ಕಲಬುರಗಿ: ಯೂತ್ ಫಾರ್ ಸೇವಾ ಸಂಸ್ಥೆ ಹಾಗೂ ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ಸಹಯೋಗದಲ್ಲಿ ನಂದೂರ (ಕೆ) ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗ್, ಪುಸ್ತಕ, ಕಂಪಾಸ್, ಪೆನ್, ಪೆನ್ಸಿಲ್, ನೋಟ್ ಬುಕ್ ಸೇರಿ ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.
ಸಂಸ್ಥೆಯ ಪ್ರಮುಖರು ಮಾತನಾಡಿ, ಆರ್ಥಿಕವಾಗಿ ತೊಂದರೆಯಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸುವ ಮೂಲಕ ಬಡಮಕ್ಕಳಿಗೆ ನೆರವಿಗೆ ಬರಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಇಲಾಖೆ ನೂಡಲ್ ಅಧಿಕಾರಿ ಶಿವಮೂರ್ತಪ್ಪ, ಬಿಆರ್ಸಿ ಈರಮ್ಮ, ಮುಖ್ಯ ಗುರು ಮಹಾನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಪೂಜಾರಿ, ಉಪಾಧ್ಯಕ್ಷೆ ಮಹಾನಂದ ದೊಡ್ಮನಿ, ಸದಸ್ಯ ನಿಂಗಣ್ಣ ದೊಡ್ಡಮನಿ, ಯೂತ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಯೋಜಕರು ಮಲ್ಲಿಕಾರ್ಜುನ ಅಂಬಲಗಿ, ಸ್ವಯಂ ಸೇವಕರಾದ ಹುಣಚಪ್ಪ, ಮಲ್ಲಿಕಾರ್ಜುನ, ಶರಣು ಇತರರಿದ್ದರು.