

ಹಂಪಾಪುರ: ಎಚ್.ಡಿ.ಕೋಟೆ ತಾಲೂಕಿನ ಕಂಚಮಳ್ಳಿ ಗೇಟ್ ಬಳಿಯಿರುವ ವನಸಿರಿ ನಾಡಿನ ಪ್ರವೇಶ ದ್ವಾರದಲ್ಲಿ ನಂದಿನಿ ಹಾಲು ಉತ್ಪನ್ನ ಮಾರಾಟ ಕೇಂದ್ರವನ್ನು ಮಾಜಿ ಸಂಸದ ಆರ್.ಧ್ರುವನಾರಾಯಣ ಸೋಮವಾರ ಉದ್ಘಾಟಿಸಿದರು.
ಬಡವರಿಂದ ಬಲ್ಲಿದವರಿಗೆ ಗುಣಮಟ್ಟದ ನಂದಿನಿ ಹಾಲಿನ ಉತ್ಪನ್ನಗಳನ್ನು ಕೈಗೆಟಕುವ ಬೆಲೆಯಲ್ಲಿ ದೊರಕುತ್ತಿರುವುದು ಹೆಮ್ಮೆಯ ವಿಚಾರ ಎಂದು ಧ್ರುವನಾರಾಯಣ ಹೇಳಿದರು.
ಬಳಿಕ ಪೇಡಾ, ಬರ್ಫಿ, ಮೈಸೂರು ಪಾಕ್ ಸೇರಿದಂತೆ ಹಲವು ಉತ್ಪನ್ನಗಳನ್ನು ಧ್ರುವ ಖರೀದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಮುಲ್ ನಿರ್ದೇಶಕ ಈರೇಗೌಡ ವಹಿಸಿದ್ದರು.
ಕಂಚಮಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ಗೋವಿಂದೇಗೌಡ, ಉಪಾಧ್ಯಕ್ಷೆ ದಾಕ್ಷಾಯಿಣಿ ಬಸವರಾಜಪ್ಪ, ಸದಸ್ಯರಾದ ಕುಮಾರ್, ನಂಜುಂಡಸ್ವಾಮಿ, ಮಹದೇವಮ್ಮ ಸಣ್ಣನಾಯಕ, ಪಿ.ಕೆ.ಶಿವರಾಜು, ಮುಖಂಡರಾದ ಶಂಕರೇಗೌಡ, ಸಿದ್ದೇಗೌಡ, ದೊಡ್ಡಕರೀಗೌಡ, ಸಿದ್ದರಾಮಪ್ಪ, ಪುರಮಹದೇವಪ್ಪ, ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್‌ಗೌಡ, ಎಚ್.ಡಿ.ಕೋಟೆ ಪುರಸಭೆ ಸದಸ್ಯ ನರಸಿಂಹಮೂರ್ತಿ, ಮಾರುಕಟ್ಟೆ ವ್ಯವಸ್ಥಾಪಕ ಎನ್.ಸಿ.ಅಶೋಕ್, ಮಾರುಕಟ್ಟೆ ಅಧಿಕಾರಿ ಎಸ್.ಚೇತನ್ ಇತರರಿದ್ದರು.