ನಂದಿನಿ ಉತ್ಪನ್ನ ಖರೀದಿಸಿ

21-kkr1,(8-23
Published on

ಕಿಕ್ಕೇರಿ: ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.

ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರೈತ ಕಲ್ಯಾಣ ಟ್ರಸ್ಟ್ ಅಡಿ ರಾಸುಗಳಿಗೆ ಒಂದು ಲಕ್ಷ ರೂ. ಜೀವ ವಿಮೆ ಸೌಲಭ್ಯ ಕಲ್ಪಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.

ಸ್ಟೀಲ್ ಕ್ಯಾನ್‌ನಲ್ಲಿ ಹಾಲು ಸರಬರಾಜು ಮಾಡಬೇಕು. ಸಕಾಲದಲ್ಲಿ ರಾಸುಗಳ ಆರೋಗ್ಯ ತಪಾಸಣೆ ಮಾಡಿಸಬೇಕು. ಒಕ್ಕೂಟದಿಂದ ಹಾಲು ವಿತರಕ ಮಕ್ಕಳ ವ್ಯಾಸಂಗಕ್ಕೆ ಹಲವು ಸೌಲಭ್ಯ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ, ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಮಹೇಶ್, ನಿರ್ದೇಶಕರಾದ ನಾಗೇಗೌಡ, ಪ್ರಕಾಶ್, ನಂಜೇಗೌಡ, ಶಿವಯ್ಯ, ಸಣ್ಣನಿಂಗೇಗೌಡ, ಕುಮಾರ್, ಮಹೇಶ್, ಪ್ರೇಮಾ, ಪುಟ್ಟಗೌರಮ್ಮ, ಮಂಜಮ್ಮ, ಕಾರ್ಯದರ್ಶಿ ಅಣ್ಣಪ್ಪ, ನಾಗರಾಜು ಶೆಟ್ಟಿ, ಯೋಗೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net