ನಂದಿ ಶಿವೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದ್ದೂರಿ ಚಾಲನೆ

1646152351964
Published on

ಚಿಕ್ಕಬಳ್ಳಾಪುರ: ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಸಚಿವ ಡಾ ಕೆ.ಸುಧಾಕರ್ ಫೌಂಡೇಷನ್ ಆಯೋಜಿಸಿರುವ ಶಿವೋತ್ಸವಕ್ಕೆ ಮಂಗಳವಾರ ಸಂಜೆ ಅದ್ದೂರಿ ಚಾಲನೆ ದೊರೆಯಿತು.

ವಿಶ್ವ ಭ್ರಾತೃತ್ವ, ಸಾಮರಸ್ಯವನ್ನು ಪ್ರತಿಪಾದಿಸುವ ಸನಾತನ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿಯು ದೇಶದ ಯುವ ಜನರ ಮೇಲಿದೆ ಎಂದು ಶಿವೋತ್ಸವಕ್ಕೆ ಚಾಲನೆ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.

ಇಡೀ ಜಗತ್ತನ್ನು ಒಂದು ಕುಟುಂಬ ಎಂಬುದಾಗಿ ಭಾವಿಸಿ ಏಕತೆಯನ್ನು ಸಾರುವ ಸನಾತನ ಧರ್ಮವು ಶತಶತವಾನಗಳಿಂದಲೂ ಜನರನ್ನು ಒಗ್ಗೂಡಿಸುವ ಕೆಲಸ ವಾಡುತ್ತಿದೆ. ಇದರ ಮಹತ್ವದ ಸಮಗ್ರ ಅಧ್ಯಯನದಲ್ಲಿ ಯುವ ಜನತೆ ತೊಡಗಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ವಾತನಾಡಿ, ಪಾವಗಡದಿಂದ ಹಿಡಿದು ಮುಳಬಾಗಿಲುವರೆಗಿನ ಜನರು ಫ್ಲೋರೈಡ್ ನೀರು ಸೇವಿಸುತ್ತಿದ್ದಾರೆ. ಇದಕ್ಕೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು ಬಯಲುಸೀಮೆ ಭಾಗಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ವೇಗ ನೀಡಲಿದೆ. ಭೂ ಸ್ವಾಧೀನ, ಪೈಪ್ ಲೈನ್ ಅಳವಡಿಕೆ ಸೇರಿ ಹಲವು ಕೆಲಸಗಳು ಬೇಗ ಮುಗಿದು, ಈ ಭಾಗಕ್ಕೆ ನೀರು ಹರಿಯಲಿದ್ದು ನಂದಿ ಬೆಟ್ಟದ ತಪ್ಪಲಿನ ಐದು ನದಿಗಳು ಸಹ ಜೀವನದಿಗಳಾಗುತ್ತವೆ ಎಂದು ತಿಳಿಸಿದರು.

ಈಗ ಅನೇಕರು ಸಮಗ್ರ ನೀರಾವರಿ ಯೋಜನೆಗಳ ಜಾರಿಯ ಬಗ್ಗೆ ಪ್ರಚಾರ ಪಡೆಯುತ್ತಿದ್ದಾರೆ. ಆದರೆ, ಹಿಂದೆ ನೀರಾವರಿ ಸಚಿವರಾಗಿದ್ದಾಗ ಕೋಲಾರ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಇಲ್ಲಿನ ನೀರಿನ ಹಾಹಾಕಾರ ಪರಿಸ್ಥಿತಿಯನ್ನು ಅರ್ಥೈಸಿಕೊಂಡೇ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಯಿತು. ಅಲ್ಲಿಯವರೆಗೂ ಯಾರಿಗೂ ಇದರ ಬಗ್ಗೆ ಗೊತ್ತಿರಲಿಲ್ಲ ಎಂದು ವಿಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಕಣ್ಣು ಮುಚ್ಚಿದ ಧ್ಯಾನದಲ್ಲೂ ಇಡೀ ಲೋಕವನ್ನು ಕಾಣುವುದರಲ್ಲಿನ ಜ್ಞಾನಧಾರಿ ಶಿವನ ಇಡೀ ಚರಿತ್ರೆಯು ಸತ್ಯ ಬೋಧನೆಯನ್ನು ಸಾರುತ್ತದೆ. ಇದರಲ್ಲಿ ಪರಸ್ಪರ ಸುಖ ದುಃಖ, ಕತ್ತಲು ಬೆಳಕಿನ ನಾನಾ ವಾರ್ಗದರ್ಶಿ ತತ್ವಗಳಿವೆ ಎಂದರು. ಭಕ್ತಿಯೇ ನಿಜವಾದ ದೊಡ್ಡ ದೈವಶಕ್ತಿ. ಇದರರ್ಥ ಉತ್ಕ್ಪ್ರಷ್ಟವಾದ ಪ್ರೀತಿ ಭಕ್ತಿಯನ್ನು ತೋರಿಸುತ್ತದೆ. ಇದಕ್ಕೆ ದೈವನಲ್ಲಿ ಕರಗಿ, ಲೀನವಾಗುವುದು ಭಕ್ತಿಯ ಸಮರ್ಪಣೆಯ ಪ್ರತೀಕ ಎಂದರು.

ಶಂಕರನಾಗ್ ಹೇಳಿದ್ರು: ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕಾಲದಲ್ಲಿಯೆ ನಟ ಶಂಕರನಾಗ್ ರೋಪ್ ವೇ ಅಳವಡಿಸುವ ಯೋಜನೆಯ ಬಗ್ಗೆ ಚರ್ಚಿಸಿದ್ದರು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಸಹಕಾರಿಯಾಗಲಿದ್ದು ತ್ವರಿತವಾಗಿ ಅನುಷ್ಠಾನಗೊಳ್ಳಬೇಕೆಂಬುದಾಗಿ ಮನವಿ ಸಲ್ಲಿಸಿದ್ದರು. ಇದು ಸಾಕಾರಗೊಳ್ಳುವ ನಿಟ್ಟಿನಲ್ಲಿ ಈಗ ಯೋಜನೆಗೆ ಚಾಲನೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಹೇಳಿದರು.

ಸಮಗ್ರ ನೀರಾವರಿ ಯೋಜನೆಗೆ ಒತ್ತು: ಕರ್ನಾಟಕದ ಕಾಶಿ ಎಂತಲೇ ಕರೆಸಿಕೊಂಡಿರುವ ನಂದಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರ ಮೊದಲ ಭಾಗವಾಗಿ ನಂದಿ ಬೆಟ್ಟಕ್ಕೆ 93 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ಅಳವಡಿಸುವುದರ ಜತೆಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತಷ್ಟು ಆಕರ್ಷಣೀಯ ತಾಣವನ್ನಾಗಿಸಲಾಗುತ್ತಿದೆ ಎಂದು ಸಚಿವ ಡಾ ಕೆ.ಸುಧಾಕರ್ ತಿಳಿಸಿದರು. ನನೆಗುದಿಗೆ ಬಿದ್ದಿರುವ ಎತ್ತಿನಹೊಳೆ ಯೋಜನೆ ಸೇರಿ ಬಾಕಿ ಉಳಿದಿರುವ ಸಮಗ್ರ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಕಾರ್ಯೋನ್ಮುಖರಾಗಿದ್ದಾರೆ ಎಂದರು. ಹಂಪಿ ಉತ್ಸವ, ಮೈಸೂರು ದಸರಾ ವಾದರಿಯಲ್ಲಿ ಮುಂದಿನ ವರ್ಷಗಳಲ್ಲೂ ಶಿವೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.

ನಂದಿಯಲ್ಲಿ ಜನಸಾಗರ: ಪ್ರತಿ ವರ್ಷದಂತೆ ಕರ್ನಾಟಕದ ಕಾಶಿಯಾಗಿರುವ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಜನಸಾಗರವೇ ಹರಿದು ಬಂತು. ಆಧ್ಯಾತ್ಮಿಕ ಮತ್ತು ಸಾಂಸ್ಕ್ಪ್ರತಿಕ ಕಾರ್ಯಕ್ರಮದಲ್ಲಿ ಜಾಗರಣೆಯ ಮೂಲಕ ಇಡೀ ರಾತ್ರಿ ಕಳೆದರು.

ನಂದಿಯಲ್ಲಿ ವಿಶೇಷ ಪೂಜೆ: ಪುರಾಣ ಪ್ರಸಿದ್ಧ ತಾಲೂಕಿನ ನಂದಿಯ ಶ್ರೀಭೋಗನಂದೀಶ್ವರ ಸ್ವಾಮಿ ಆಲಯಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವರಿಗೆ ಏಕವಾರ ಅಭಿಷೇಕ, ಏಕಾದಶವಾರ ರುದ್ರಾಭಿಷೇಕ ಕೈಗೊಳ್ಳಲಾಗಿತ್ತು. ಹಂಸ ವಾಹನೋತ್ಸವ, ಗಿರಿಜಾಂಬಾ ಮತ್ತು ಭೋಗನಂದೀಶ್ವರ ಸ್ವಾಮಿಯವರ ಕಲ್ಯಾಣೋತ್ಸವ ಅದ್ದೂರಿಯಾಗಿ ನೆರವೇರಿತು. ಇನ್ನೂ ತೆರೆದ ತಿಂಡಿ ತಿನಿಸು, ಆಟಿಕೆ ವಸ್ತು ಮಾರಾಟದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಮಾತ್ರವಲ್ಲದೇ ಆಂಧ್ರ ಸೇರಿ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸತ್ಯಸಾಯಿ ಆಶ್ರಮದ ಶ್ರೀ ಮಧುಸೂಧನ ಸಾಯಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಂಸದ ಮೋಹನ್, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಡಿಸಿ ಆರ್.ಲತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net