

ನಂಜನಗೂಡು: ರಾಜ್ಯ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಂಜನಗೂಡಿನಲ್ಲಿ ಶೇ.88.8 ರಷ್ಟು ಮತ ಚಲಾವಣೆಯಾಗಿದೆ. ನಗರದ ತಾಲೂಕು ಆಡಳಿತ ಭವನದ ಆವರಣದಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 666 ಶಿಕ್ಷಕರು ಹಕ್ಕು ಚಲಾಯಿಸಿದರು.
ನಂಜನಗೂಡು ತಾಲೂಕಿನಲ್ಲಿ 479 ಪುರುಷ ಹಾಗೂ 271 ಮಹಿಳಾ ಮತದಾರರಿದ್ದು ಈ ಪೈಕಿ 433 ಮಂದಿ ಪುರುಷರು ಹಾಗೂ 233 ಮಹಿಳೆಯರು ಮತ ಚಲಾಯಿಸಿದರು.
ಇನ್ನು ಮತದಾನ ಕೇಂದ್ರದ ಹೊರಗೆ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರ ಬೆಂಬಲಿಗರು ಮತಯಾಚನೆ ಮಾಡುವ ಮೂಲಕ ಮತದಾರರ ಮನವೊಲಿಸಲು ಕೊನೇ ಕ್ಷಣದ ಪ್ರಯತ್ನ ನಡೆಸಿದರು.