

ನಂಜನಗೂಡು: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಎಸ್.ಆರ್.ರಂಗನಾಥನ್‌ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಾಲಯ ದಿನ ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಓದಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಮೊಬೈಲ್ ನಿಂದ ಪುಸ್ತಕದ ಕಡೆಗೆ ಒಲವು ಹೆಚ್ಚು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸಿ.ಆರ್.ದಿನೇಶ್ ಹೇಳಿದರು.
ಗ್ರಂಥಪಾಲಕಿ ಎಂ.ಎನ್.ಸುಲಕ್ಷಣ ಮಾತನಾಡಿ ಯುವ ಮನಸ್ಸುಗಳನ್ನು ಅಧ್ಯಯನದ ಕಡೆಗೆ ಹೋಗುವ ಹಾಗೆ ಮಾಡಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ರಂಗಸ್ವಾಮಿ ನಾಗರಾಜು, ಪ್ರಕಾಶ ಸ್ವಾಮಿ ಗೌಡ ,ಮಾಲತಿ ,ಭವ್ಯ , ಮೀನಾ ,ಆದಿಲ್, ಸುಮಾ ರೂಪಾ, ಸುಮಿತ್ರಾ ,ಟಿ ಕೆ ರವಿ, ನಾಗರಾಜ್ ರೆಡ್ಡಿ, ರಾಮಾನುಜಾ, ದಿನೇಶ್, ಹರೀಶ, ವತ್ಸಲಾ, ಪದ್ಮಾವತಿ ,ಅಂಬಿಕಾ, ಶ್ರುತಿ, ಬಿಂದು, ಬಸವಣ್ಣ, ನಟರಾಜ್, ನಾಗವೇಣಿ ,ಮಿಲ್ಟನ್, ಮಹದೇವಸ್ವಾಮಿ ನಿಂಗಯ್ಯ , ದಿವ್ಯ, ನಾಗಮ್ಮ ಇದ್ದರು.