

ಹಾಸನ: ದೇಶದಲ್ಲಿ ಅತಿ ದೊಡ್ಡ ಪುಸ್ತಕಗಳ ಬಂಡಾರವೆಂಬ ಹೆಗ್ಗಳಿಕೆಗೆ ಖ್ಯಾತಿಯಾಗಿರುವ ಸಪ್ನ ಬುಕ್ ಬುಕ್ ಹೌಸ್‌ನ 22ನೇ ನೂತನ ಶಾಖೆಯನ್ನು ಹಾಸನದಲ್ಲಿ ನ.7ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಸಪ್ನ ಬುಕ್ ಹೌಸ್ ಸಂಸ್ಥಾಪಕ ನಿರ್ದೇಶಕ ನಿತಿನ್ ಷಾ ತಿಳಿಸಿದರು.
ಸಪ್ನ ಬುಕ್ ಹೌಸ್ ಕಳೆದ 57 ವರ್ಷಗಳಿಂದ ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ತನ್ನ ಶಾಖೆಯನ್ನು ಆರಂಭಿಸಿ, ಪುಸ್ತಕ ಎಲ್ಲರ ಕೈ ಸೇರಬೇಕು ಮತ್ತು ಎಲ್ಲರೂ ಪುಸ್ತಕವನ್ನು ಓದಬೇಕು ಎಂಬ ನಿಟ್ಟಿನಲ್ಲಿ ಶಾಖೆಗಳನ್ನು ಆರಂಭಿಸಲಾಗಿದೆ. ಅದೇ ರೀತಿ ನಗರದ ಗಾಂಧಿ ಬಜಾರ್ ಸರ್ಕಲ್‌ನಲ್ಲಿ ನೂತನ ಬೃಹತ್ ಶಾಖೆಯನ್ನು ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ ಅವರು ಮಾಡಲಿದ್ದು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ , ಖ್ಯಾತ ಸಾಹಿತಿ ಭಾನು ಮುಸ್ತಾಕ್, ಹಾಸನ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಟಿ.ಸಿ.ತಾರಾನಾಥ್ ಸೇರಿದಂತೆ ಜಿಲ್ಲೆ ಮತ್ತು ರಾಜ್ಯದ ಹಲವು ಕವಿಗಳು ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
1967ರಲ್ಲಿ ನಮ್ಮ ತಂದೆ ಸುರೇಶ್ ಚಿಕ್ಕ ಮಳಿಗೆಯನ್ನ ಆರಂಭಿಸಿದರು. ನಂತರ ದೊಡ್ಡ ಮಟ್ಟದಲ್ಲಿ ಕೊಂಡುಯುವ ಪ್ರಯತ್ನ ಮಾಡುತ್ತಿದ್ದೇವೆ. ಪುಸ್ತಕದ ಜೊತೆಗೆ ಸ್ಟೇಷನರಿ ಸೇರಿದಂತೆ ಇನ್ನಿತರೆ ವಸ್ತುಗಳ ಮಾರಾಟವನ್ನು ಮಾಡುವ ಮೂಲಕ ಜನರನ್ನ ಆಕರ್ಷಿಸಲಾಗುವುದು. ಹಾಸನದಲ್ಲಿ ಕೂಡ ಪುಸ್ತಕ ಬಿಡುಗಡೆ ಸಂವಾದದಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಪ್ನ ಬುಕ್ ಹೌಸ್‌ನ ನಿದೇಶ ಷಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ, ಹಿರಿಯ ಪತ್ರಕರ್ತ ಎಚ್.ಬಿ. ಮದನ್‌ಗೌಡ ಮತ್ತು ದೊಡ್ಡೇಗೌಡ ಇದ್ದರು.