ನ.7ರಂದು ಕಲಾವಿದರೊಂದಿಗೆ ಸಂವಾದ

Published on

ಮೈಸೂರು: ಆಕ್ಟಿಂಗ್ ಶಾಸ್ತ್ರ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ, ಅರಿವು ರಂಗದಿಂದ ನ.7ರಂದು ಕಲಾವಿದರೊಂದಿಗೆ ಸಂವಾದ ಆಯೋಜಿಸಲಾಗಿದೆ.
ಕಲಾಮಂದಿರದ ಕಿರು ರಂಗಮಂದಿರದಲ್ಲಿ ಅಂದು ಸಂಜೆ 5ಕ್ಕೆ ಸಂವಾದ ಆಯೋಜಿಸಲಾಗಿದ್ದು, ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಪಂಕಜ್ ತ್ರಿಪದಿ, ಎಂ.ಡಿ.ಪಲ್ಲವಿ, ಸರಸ್ವತಿ, ಜನಾರ್ದನ (ಜನ್ನಿ), ಕೆ.ಪಿ.ಲಕ್ಷ್ಮಣ, ಯತೀಶ್ ಎನ್.ಕೊಳ್ಳೇಗಾಲ, ರಂಗನಿರ್ದೇಶಕ ಶ್ರೀಪಾದ್ ಭಟ್ ಭಾಗವಹಿಸುತಿದ್ದಾರೆ. ಸಂಧ್ಯಾ ಮೆಂಡೋನ್ಕ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ನಟರು ನಟನೆ, ನಾಟಕದ ಬಗ್ಗೆ, ಅದರ ಪ್ರಾಮುಖ್ಯತೆ ಕುರಿತು ಮಾತನಾಡಿದ್ದೇ ಕಡಿಮೆ. ಹಾಗಾಗಿ ನಟರಿಗೊಂದು ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ಅವರ ಸ್ವವಿಮರ್ಶೆ, ತಮ್ಮ ಮಾಧ್ಯಮದ ಏಳು-ಬೀಳು, ಮುಂದಿನ ಆಶಯ ಕುರಿತು ಅನಿಸಿಕೆ ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net