ನ.2ರಂದು ದತ್ತಿ ಉಪನ್ಯಾಸ

Published on

ಕೊಳ್ಳೇಗಾಲ : ಪಟ್ಟಣದ ಲಯನ್ಸ್ ಸಮುದಾಯ ಭವನದಲ್ಲಿ ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ನ.2ರಂದು ಸಂಜೆ 5 ಗಂಟೆಗೆ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ಲಿಂಗೈಕ್ಯ ಗೌ.ಮು. ಶಿವಪ್ಪದೇವರು ಹೊಂಡರಬಾಳು ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಮುದ್ದುವೀರಪ್ಪ ಸ್ಮಾರಕ ಆಸ್ಪತ್ರೆಯ ವೈದ್ಯ ಡಾ.ಎಸ್.ಲೋಕೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಸಾಪ ತಾಲೂಕು ಘಟಕದ ಲಯನ್ಸ್ ಎಸ್.ನಾಗರಾಜು (ಕೊಂಗರಹಳ್ಳಿ) ಅಧ್ಯಕ್ಷತೆ ವಹಿಸುವರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿ.ಚಿಕ್ಕಬಸವಯ್ಯ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದತ್ತಿ ಉಪನ್ಯಾಸದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಸರಸ್ವತಿ ಹೊನ್ನಪ್ಪ, ಶರಣರ ವಿಚಾರಧಾರೆಗಳು ಹಾಗೂ ನಾಡು, ನುಡಿ, ಜಲ, ಸಂಸ್ಕೃತಿ ಬಗ್ಗೆ ಮಾತನಾಡಲಿದ್ದಾರೆ. ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಇಂದ್ರೇಶ್, ಖಜಾಂಚಿ ವಿರೂಪಾಕ್ಷಸ್ವಾಮಿ, ಕಸಾಪ ಕಾರ್ಯದರ್ಶಿಗಳಾದ ಎಂ.ಚಿಕ್ಕರಾಜು, ಸಿ.ನಾಗರಾಜು, ಶಿವಶಂಕರ್ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net