ನ.23 ರಂದು ಸಾವರ್ಕರ್ ಜೀವನಾಧಾರಿತ ಕರಿನೀರ ವೀರ ನಾಟಕ ಪ್ರದರ್ಶನ

ನ.23 ರಂದು ಸಾವರ್ಕರ್ ಜೀವನಾಧಾರಿತ ಕರಿನೀರ ವೀರ ನಾಟಕ ಪ್ರದರ್ಶನ
Published on

ಹಾಸನ: ಸ್ವಾತಂತ್ರ್ಯ ವೀರ ಸಾವರ್ಕರ್ ಜೀವನಾಧಾರಿತ ಕರಿನೀರ ವೀರ ನಾಟಕ ಪ್ರದರ್ಶನವನ್ನು ನ.23ರಂದು ಸಂಜೆ 6 ಗಂಟೆಗೆ ನಗರದ ಕಲಾಭವನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ರಾಷ್ಟ್ರೋದಯ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚೇತನ್ ನಾರಾಯಣ್ ತಿಳಿಸಿದರು.
ರಾಷ್ಟ್ರೋದಯ ಸೇವಾ ಚಾರಿಟೇಬಲ್ ಟ್ರಸ್ಟ್, ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಈಗಾಗಲೇ ಕರಿನೀರ ವೀರ ನಾಟಕ ರಾಜ್ಯಾದ್ಯಂತ ಹನ್ನೆರಡು ಪ್ರದರ್ಶನ ಕಂಡಿದೆ. ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಾಗರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಇದೀಗ ಹಾಸನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಯಶಸ್ವಿನಿ ಮಾತನಾಡಿ, ಕರಿನೀರ ವೀರ ನಾಟಕವನ್ನು ಮೈಸೂರಿನ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರಿಯಪ್ಪ ರಚಿಸಿ ನಿರ್ದೇಶಿಸಿದ್ದಾರೆ. ಈಗಾಗಲೇ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿರುವ ಈ ನಾಟಕ 3 ಗಂಟೆಗಳ ಕಾಲ ನಡೆಯಲಿದೆ. ಮಹಾತ್ಮ ಗಾಂಧೀಜಿಯವರ ಹತ್ಯೆಯಿಂದ ಸಂಸತ್‌ವರೆಗೂ ಈ ನಾಟಕ ಪ್ರದರ್ಶನ ಕೊಂಡೊಯ್ಯುತ್ತದೆ. ಸಾವರ್ಕರ್ ಜೈಲು ವಾಸದ ವೇಳೆ ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಚಿತ್ರ ಹಿಂಸೆ, ಸ್ವಾತಂತ್ರ್ಯ ಭಾರತದಲ್ಲಿಯೂ ಅನುಭವಿಸಿದ ಕಷ್ಟ ನಷ್ಟಗಳು, ಸಮಾನತೆಗಾಗಿ ನಡೆಸಿದ ಹೋರಾಟಗಳನ್ನು ಕಥೆ ಒಳಗೊಂಡಿದೆ. ನೂರು ರೂ. ಪ್ರದರ್ಶನದ ಟಿಕೆಟ್ ಶುಲ್ಕ ನಿಗದಿ ಮಾಡಲಾಗಿದೆ. ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ 9731598989/9886090527 ಸಂಖ್ಯೆಗೆ ಸಂಪರ್ಕಿಸಬಹುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರದ ಮಂಡಲ ಅಧ್ಯಕ್ಷ ವೇಣುಗೋಪಾಲ್, ಸಂಸ್ಥೆಯ ಪದಾಧಿಕಾರಿಗಳಾದ ಸಂದೇಶ್, ಅನಿಲ್,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net