ನ.23 ರಂದು ಜಾತ್ರಾ ಮಹೋತ್ಸವ

21-4
ಬಾಗಲಕೋಟೆ ಕುಮಾರೇಶ್ವರ ವಿಶ್ವ ಧರ್ಮ ಶಾಂತಾಶ್ರಮ ಸಮಿತಿ ಅಧ್ಯಕ್ಷ ಜಿ.ಎನ್.ಪಾಟೀಲ ಸುದ್ದಿಗೋಷ್ಠಿ. ಸಮಿತಿ ಕಾರ್ಯದರ್ಶಿ ಶ್ರೀಶೈಲ ಕರಿಶಂಕರಿ ಇದ್ದರು.
Published on

ಬಾಗಲಕೋಟೆ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ಸಮಿತಿ ವತಿಯಿಂದ ನ.೨೩ ರಂದು ಸಾಯಿ ಮಂದಿರದಲ್ಲಿರುವ ಶಿವಶರಣೆ ಗುಡ್ಡಾಪುರ ದಾನಮ್ಮ ದೇವಿ ಹಾಗೂ ಪರಮ ಶಿವಯೋಗಿ ಎಡೆಯೂರು ಸಿದ್ಧಲಿಂಗೇಶ್ವರರ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಮಾರೇಶ್ವರ ವಿಶ್ವ ಧರ್ಮ ಶಾಂತಾಶ್ರಮ ಸಮಿತಿ ಅಧ್ಯಕ್ಷ ಜಿ.ಎನ್.ಪಾಟೀಲ ಹೇಳಿದರು.
ಗುಡ್ಡಾಪುರ ದಾನಮ್ಮದೇವಿ ಹಾಗೂ ಎಡೆಯೂರು ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ‌ ಅಂದು ಬೆಳಗ್ಗೆ ೯ ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ನಂತರ ಕುಂಭ ಮೇಳ , ವಾದ್ಯ ಮೇಳಗಳೊಂದಿಗೆ ಗುಡ್ಡಾಪುರ ದಾನಮ್ಮ ದೇವಿ ಹಾಗೂ ಎಡೆಯೂರು ಸಿದ್ಧಲಿಂಗೇಶ್ವರರ ಪಲ್ಲಕ್ಕಿ ಉತ್ಸವ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಸರ್ಕಲ್‌ನಿಂದ ಆರಂಭಾಗುವ ಮೆರವಣಿಗೆ ಕುಮಾರೇಶ್ವರ ವಿಶ್ವ ಧರ್ಮ ಶಾಂತಾಶ್ರಮದ ಮಂದಿರವನ್ನು ತಲುಪುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ ೧೦.೩೦ ಗಂಟೆಗೆ ಸಾಯಿ ಮಂದಿರದ ಭಕ್ತಿ ಭವನದಲ್ಲಿ ಮಾಸಿಕ ಶರಣ ಚಿಂತನ ಗೋಷ್ಠಿ ಜರುಗಲಿದೆ. ಹುಲ್ಯಾಳ ಓಂಕಾರಾಶ್ರಮದ ಜ್ಞಾನ ಯೋಗಿನಿ ಮಾತೋಶ್ರೀ ಶ್ರೀದೇವಿತಾಯಿ ಅವರು ಗುಡ್ಡಾಪುರ ದಾನಮ್ಮದೇವಿ ಹಾಗೂ ಎಡೆಯೂರು ಸಿದ್ಧಲಿಂಗೇಶ್ವರರ ಕುರಿತು ಉಪನ್ಯಾಸ ನೀಡಲಿದ್ದಾರೆ. ಜಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ .ಎಸ್ .ಪಾವಟೆ, ಶ್ರೀಶೈಲ ಕರಿಶಂಕರಿ, ಪಾರ್ವತಮ್ಮ ಎಂ.ಬಳೂಲಮಠ ಉಪಸ್ಥಿತರಿರುವರು ಎಂದು ಹೇಳಿದರು.
ಪ್ರತಿ ವರ್ಷ ಗುರುಪೌರ್ಣಿಮೆ ದಿನ ಭಗವಾನ್ ಸತ್ಯ ಸಾಯಿಯವರ ಸ್ಮರಣೋತ್ಸವ, ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ವಾರ್ಷಿಕೋತ್ಸವ, ಶ್ರಾವಣ ಮಾಸದಲ್ಲಿ ಪ್ರವಚನ, ನವರಾತ್ರಿ ಹಾಗೂ ವಿಜಯ ದಶಮಿಯ ದಿನ ಬನ್ನಿ ಉತ್ಸವ, ಶಿವರಾತ್ರಿಯಂದು ಮಹಾ ಪೂಜೆ ಕಾರ್ಯಕ್ರಮ ನೆರವೇರಿಸಲಾಗುವದು. ಪ್ರತಿ ತಿಂಗಳು ಅಮಾವಾಸ್ಯೆಯ ದಿನ ಶರಣ ಚಿಂತನ ಗೋಷ್ಠಿ ಹಮ್ಮಿಕೊಳ್ಳಲಾಗುತ್ತದೆ. ಧಾರ್ಮಿಕ, ಸಾಮಾಜಿಕ ಚಟುವಟಿಕೆ ನಿರಂತರ ಹಮ್ಮಿಕೊಳ್ಳುತ್ತ ಬರಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಶ್ರೀಶೈಲ ಕರಿಶಂಕರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net