

ಹಾಸನ: ನ.1 ರಿಂದ ಮೂರು ದಿನಗಳ ಕಾಲ ತೋಟಗಾರಿಕಾ ಮಹಾ ವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೀಟ ವಿಸ್ಮಯ, ಪೂರ್ವ ಕೀಟಗಳ ಸಂಗ್ರಹ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರದ ಸಂಯೋಜಕ ಧನಂಜಯ್ ಜೀವಾಳ ಹೇಳಿದರು.
ತೋಟಗಾರಿಕೆ ಮಹಾ ವಿದ್ಯಾಲಯ, ಮೂಡಿಗೆರೆ ಗೆಳೆಯರ ಬಳಗ, ಜಿಲ್ಲಾ ನೇಚರ್ ಕ್ಲಬ್, ಹಸಿರು ಭೂಮಿ ಪ್ರತಿಷ್ಟಾನ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಮಲೆನಾಡು ಜನಪರ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಚನ್ನಪಟ್ಟಣದದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಪರಂಪರೆ ಪುರಾತನ ವಸ್ತುಗಳ ಪ್ರದರ್ಶನ, ಸುಮಾರು 20 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಕೀಟಗಳನ್ನು ಪ್ರದರ್ಶನಕ್ಕೆ ಮಾಡುಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದರ ಜತೆಗೆ ಪುಸ್ತಕ ಜೀವವೈವಿಧ್ಯ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಭೂಮಿಯ ಮೇಲೆ ಇರುವ ವೈವಿಧ್ಯಮಯ ಕೀಟ ಸಂಕುಲದ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದು,್ದ ಹೆಚ್ಚಿನ ಸಂಖ್ಯೆಯ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ಸ್ವಾಮಿ,ಗಿರಿಜಾಂಬಿಕ, ಇತರರು ಇದ್ದರು