ನ.14ರಿಂದ ರಾಷ್ಟ್ರೀಯ ಔಷಧ ಸಪ್ತಾಹ

b8c1b6f6-0943-4847-9a79-67a2ea22bfae
Published on

ಮೈಸೂರು: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್‌ಎಸ್ ಔಷಧ ವಿಜ್ಞ್ಞಾನ ಮಹಾವಿದ್ಯಾಲಯ, ರಾಷ್ಟ್ರೀಯ ಔಷಧ ವಿಜ್ಞಾನ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ನ.14ರಿಂದ 19ರವರೆಗೆ ರಾಷ್ಟ್ರೀಯ ಔಷಧ ಸಪ್ತಾಹ ಹಮ್ಮಿಕೊಳ್ಳಲಾಗಿದೆ.

14ರಂದು ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ರಾಜೇಂದ್ರ ಸಭಾಂಗಣದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಸಪ್ತಾಹ ಉದ್ಘಾಟಿಸಲಿದ್ದು, ಡಾ.ಉಪೇಂದ್ರ ಶೆಣೈ, ಡಾ.ಟಿ.ಎಂ.ಪ್ರಮೋದ್‌ಕುಮಾರ್, ಡಾ.ಹನುಮಂತಚಾರ್, ಡಾ.ಎನ್.ಮಂಜುನಾಥ್ ಇನ್ನಿತರರು ಪಾಲ್ಗೊಳ್ಳುವರು ಎಂದು ಎಂದು ಔಷಧ ತಜ್ಞ ಡಾ.ಕೆ.ಎನ್.ಕೃಷ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

15ರಂದು ಬೆಳಗ್ಗೆ 10ಕ್ಕೆ ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ, 16ರಂದು ಲಲಿತ ಮಹಲ್, ಬನ್ನಿಮಂಟಪ ಬಡಾವಣೆ, ಆಕಾಶವಾಣಿ ವೃತ್ತದಲ್ಲಿ ಬೆಳಗ್ಗೆ 9ಕ್ಕೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು. 17ರಂದು ಜೆಎಸ್‌ಎಸ್ ಫಾರ್ಮಸಿ ಕಾಲೇಜು ಆವರಣದಲ್ಲಿ 61 ಸಸಿಗಳನ್ನು ನೆಡಲಾಗುವುದು, 18ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಒಳಗೊಂಡ ಅಂತರ ಕಾಲೇಜು ಸ್ಪರ್ಧೆ ನಡೆಯಲಿವೆ. 19ರಂದು ಕಾಲೇಜು ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net