ಧ್ವಜ ಕಿತ್ತಿದ್ದಕ್ಕೆ ಚಂದು ಪಾಟೀಲ್ ಕಿಡಿ

Chandu patil
Published on
  • ಕಲಬುರಗಿ: ವಾಜಪೇಯಿ, ಅಡ್ವಾಣಿ, ಮಹಾಜನ್ ಅವರಂಥ ನಾಯಕರ ಶ್ರಮದಿಂದ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಬಿಎಸ್‌ವೈ, ಅನಂತಕುಮಾರ ಸೈಕಲ್ ಮೇಲೆ ತಿರುಗಾಡಿ ೧೧೫ ಸ್ಥಾನ ಗೆಲ್ಲುವಂತೆ ಮಾಡಿದ್ದಾರೆ. ಇದೀಗ ವಿಜಯೇಂದ್ರ ಅಣ್ಣ ಅವರ ನೇತೃತ್ವದಲ್ಲಿ ಪ್ರತಿ ಬೂತ್‌ಗೆ ಹೋಗಿ, ಪಕ್ಷ ಕಟ್ಟೋಣ ಎಂದು ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಹೇಳಿದರು.
  • ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಏರ್ಪಡಿಸಿದ್ದ ಬಿಜೆಪಿ ಪದಗ್ರಹಣ ಸಮಾರಂಭ, ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಾರ್ಯಕರ್ತರಿಂದ ಮುಖಂಡರು ಇದ್ದು, ಅವರ ಜತೆಗೆ ನಾವು ಸದಾ ಇರುತ್ತೇವೆ. ಕಾಂಗ್ರೆಸ್ ಸಹೋದರರೇ ಇದೀಗ ಹೇಳುತ್ತಿದ್ದಾರೆ ೨೦ಕ್ಕಿಂತ ಹೆಚ್ಚು ಸ್ಥಾನ ಅಂತ್ತಿದ್ದಾರೆ. ೨೮ ಸ್ಥಾನ ಬರುತ್ತದೆ. ಅದರಲ್ಲಿ ಕಲಬುರಗಿ ಮೊದಲ ಸ್ಥಾನದಲ್ಲಿರುತ್ತದೆ. ವಿಜಯೇಂದ್ರ ಅಣ್ಣನ ಜತೆಗೆ ಹನುಮಂತನAತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  • ಕಲಬುರಗಿಯಲ್ಲಿ ಕೇಸರಿ ಧ್ವಜ ನೆಟ್ಟರೆ ಬೆಂಗಳೂರಿನಲ್ಲಿ ಕುಳಿತವರಿಗೆ ತ್ರಾಸ್ ಆಗ್ತಿದೆ. ಷಡ್ಯಂತ್ರ ಮಾಡಿ ಅಧಿಕಾರಿಗಳನ್ನು ಛೂ ಬಿಟ್ಟು ಬಿಜೆಪಿ ಜಂಡಾ ತೆಗೆಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾರ್ಯಕರ್ತರಿಗಾಗಿ ಹಗಲಿರುಳು ನಾವು ಮುಖಂಡರಿz್ದೆÃವೆ. ರಾಹುಲ್ ಗಾಂಧಿ ಜೋಡೋ ಮಾಡಿದ್ದಕ್ಕೆ ಮೂರು ರಾಜ್ಯ ಹೋದ್ವು, ಈಗ ಮತ್ತೆ ಯಾತ್ರೆ ಮಾಡಿದ್ದಕ್ಕೆ ಮಮತಾ, ನಿತೀಶ ಹೋದ್ರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮನೆಗೆ ಹೋಗುತ್ತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net