ಧೈರ್ಯದಿಂದ ಕರೊನಾ ಗೆಲ್ಲಿ

28RAM-1-Web
ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಬಡವರು ಹಾಗೂ ಕರೊನಾ ಸೇನಾನಿಗಳಿಗೆ ಚಿಕ್ಕರೇವಣ್ಣನವರ ಅಭಿಮಾನಿ ಬಳಗದಿಂದ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೃಷ್ಣಾನಂದ ಸ್ವಾಮೀಜಿ, ಜಗದಾತ್ಮಾನಂದ ಸ್ವಾಮೀಜಿ, ಶಶಿಕಾಂತ ವರ್ಮಾ ಇತರರಿದ್ದರು.
Published on

ರಾಮದುರ್ಗ: ಕರೊನಾ ವೈರಸ್‌ಗೆ ಜನರು ಆತಂಕಪಡಬಾರದು. ಧೈರ್ಯದಿಂದ ಅದನ್ನು ಗೆಲ್ಲಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ತಾಲೂಕಿನ ಕಟಕೋಳ ಗ್ರಾಮದಲ್ಲಿ ಉದ್ಯಮಿ, ಸಮಾಜ ಸೇವಕ ಚಿಕ್ಕರೇವಣ್ಣನವರ ಅಭಿಮಾನಿ ಬಳಗದ ನೇತೃತ್ವದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಕರೊನಾ ಸೇನಾನಿಗಳು ಹಾಗೂ ಬಡ ಕುಟುಂಬಗಳಿಗೆ ಶುಕ್ರವಾರ ದಿನಸಿ ಸಾಮಗ್ರಿಗಳ ಕಿಟ್, ಸ್ಟೀಮರ್ ವಿತರಿಸಿ ಮಾತನಾಡಿದರು. ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಚಿಕ್ಕರೇವಣ್ಣವರ ಅವರು ದಿನಸಿ ಕಿಟ್ ಸೇರಿ ಅಗತ್ಯ ಸಾಮಗ್ರಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಖನಾಯ್ಕನಕೊಪ್ಪ ಪೂರ್ಣಾನಂದ ಮಠದ ಕೃಷ್ಣಾನಂದ ಶ್ರೀ, ರಾಮದುರ್ಗ ಸಿದ್ಧಾರೂಢ ಮಠದ ಜಗದಾತ್ಮಾನಂದ ಶ್ರೀ, ಸಿಪಿಐ ಶಶಿಕಾಂತ ವರ್ಮಾ, ಮಹಾದೇವ ಕಾಮಣ್ಣವರ, ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಜಿ.ವಿ.ನಾಡಗೌಡ್ರ, ಬಸಪ್ಪ ಶೇಡಬಾಳ, ಶಶಿಕಾಂತ ಉದಗಟ್ಟಿ, ಬಿ.ಆರ್.ದೊಡಮನಿ, ಚಿಕ್ಕರೇವಣ್ಣನವರ ಅಭಿಮಾನಿ ಬಳಗದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net