

ಕಲಘಟಗಿ: ಲೋಕದೊಳಗಿನ ಮೌಢ್ಯವನ್ನು ಹೋಗಲಾಡಿಸಿ, ವ್ಯಾಪಕವಾದ ಅರ್ಥವತ್ತಾದ ಧಾರ್ವಿುಕ ತತ್ತ್ವಚಿಂತನೆಯನ್ನು ಜಗತ್ತಿನ ಉದ್ದಗಲಕ್ಕೆ ಮೊಟ್ಟ ಮೊದಲಿಗೆ ಸಾರಿದ ಮಹಾಪುರುಷರಲ್ಲಿ ಶ್ರೀ ಶಂಕರಾಚಾರ್ಯರು ಪ್ರಥಮರು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಂಗಳವಾರ ಸರಳವಾಗಿ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯ ಜಯಂತಿಯಲ್ಲಿ ಶಂಕರಾಚಾರ್ಯರ ಭಾವವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂದು ಸಾರಿದ ಮೊದಲ ಸತ್ಪರುಷರು ಶಂಕರಾಚಾರ್ಯರು ಅವರು 8ನೇ ವರ್ಷದಲ್ಲಿಯೇ ನಾಲ್ಕು ವೇದಗಳನ್ನು ಅಧ್ಯಯನಗೈದು 12ನೇ ವಯಸ್ಸಿಗೆ ಸರ್ವಶಾಸ್ತ್ರಗಳನ್ನು ಅರಿತು 16ನೇ ವಯಸ್ಸಿಗೆ ಭಾಷ್ಯ ಬರೆದರು. 30ನೇ ವಯಸ್ಸಿಗೆ ಇಹಲೋಕಯಾತ್ರೆ ಪೂರೈಸಿದ ಪ್ರಪ್ರಥಮ ತತ್ತ್ವಜ್ಞಾನಿಗಳು. ಅವರ ಸಾಧನೆಯ ಸಾರವನ್ನು ನಾವು ಅರಿತುಕೊಂಡು ಮá-ನ್ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ವೇ. ರಮೇಶಭಟ್ ಜೋಶಿ ಮಾತನಾಡಿ, ಅದ್ವೈತ ಎಂಬುದು ಎರಡಿಲ್ಲ. ಆತ್ಮ ಮತ್ತು ಪರಮಾತ್ಮವು ಒಂದೇ ಎಂದು ಹೇಳಿದ ಮೊದಲಿಗರು ಆದಿ ಗುರು ಶಂಕರಾಚಾರ್ಯರು. ಬ್ರಹ್ಮ ಬೇರೆ ಅಲ್ಲ ನಾವು ಬೇರೆ ಅಲ್ಲ ಎಂದು ಪಾರಮಾರ್ಥಿಕವಾಗಿ ಮೇಲು- ಕೀಳು ಎಂಬ ಭಾವನೆಯನ್ನು ಹೊಡೆದೊಡಿಸಿದ ಸಿದ್ಧಿ ಪುರುಷರು. ಅದ್ವೈತದ ತಳಹದಿ ಅರಿತು ವೇದ, ಉಪನಿಷತ್ತು, ಶಾಸ್ತ್ರಗಳನ್ನು ಪಾಲಿಸುತ್ತ ನಡೆದರೆ ಮನಕುಲ ಉದ್ಧಾರವಾಗುತ್ತದೆ ಎಂದರು. ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿದರು.
ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಎಸ್.ಕೆ. ಪಾಟೀಲಕುಲಕರ್ಣಿ, ಸತೀಶ ವರ್ಕ, ಮುರುಳಿಧರ ಪೂಜಾರ, ಸುಬ್ಬಣ್ಣ ದೇಸಾಯಿ, ಮಧುಸೂದನ ಉಪಾಧ್ಯ, ರಾಘವೇಂದ್ರ ತಡಸ, ಚಿದಂಬರ ಜೋಶಿ, ಪಾಂಡುರಂಗ ಜೋಶಿ, ಉಮೇಶ ಜೋಶಿ, ಅರುಣ ಪಾಟೀಲ, ಸುನಿತಾ ಪಾಟೀಲ, ತಾಲೂಕು ಆಡಳಿತದ ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.