

ಯಾದಗಿರಿ: ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶಹಾಪುರ ತಾಲೂಕಿನ ಹುರಸಗುಂಡಿಗಿ ಗ್ರಾಮದ ಬಳಿಯ ಸನ್ನತಿ ಬ್ಯಾರೇಜ್ನ ಭೀಮಾನದಿ ತಟದಲ್ಲಿ ಭಗವಾನ ವೇದವ್ಯಾಸ ಬ್ರಹ್ಮಶ್ರೀ ಪೀಠದಿಂದ ಮಂಗಳವಾರ ಸಂಜೆ ಭೀಮಾರತಿ ಕಾರ್ಯಕ್ರಮ ಜರುಗಿತು.
ಕಾಶೀ ಮಾದರಿಯಲ್ಲಿ ಗಂಗಾ ಆರತಿಯ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಠದ ಸಂಸ್ಥಾಪಕ ಶ್ರೀರಾಜಗುರು ಸ್ವಾಮಿಗಳು ಆಶಿರ್ವಚನ ನೀಡಿ, ಹಿಂದುಗಳು ಪವಿತ್ರವಾದ ಕಾಶೀ ಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ಗಂಗಾರತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂಥ ಮಹತ್ವದ ಧಾಮರ್ಿಕ ಸಮಾರಂಭ ಆಯೋಜಿಸಿರುವುದು ಶ್ಲಾಘನೀಯ ಜನತೆ ಧಾಮರ್ಿಕತೆಯಲ್ಲಿ ನಂಬಿಕೆ ಇಡಬೇಕು ಎಂದರು.
ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಉಮೇಶ ಮುದ್ನಾಳ ಮಾತನಾಡಿ, ಈ ಭಾಗದಲ್ಲಿ ಧಾಮರ್ಿಕ ಸಭೆಗಳು ಹೆಚ್ಚುಹೆಚ್ಚು ನಡೆಯಬೇಕು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅವಿದ್ಯಾವಂತ, ಕೃಷಿ, ಕೂಲಿ ಕಾಮರ್ಿಕರೇ ಇದ್ದು ದುಶ್ಚಟಗಳಿಗೆ ದಾಸರಾಗಿದ್ದಾರೆ. ಅವುಗಳಿಂದ ಮುಕ್ತಿ ದೊರಕಿಸಬೇಕಾಗಿದೆ ಎಂದರು.