ಧಾರ್ಮಿಕತೆಗಿದೆ ಸಮಾಜ ಒಗ್ಗೂಡಿಸುವ ಶಕ್ತಿ

30-77
ಗವನಾಳ ಗ್ರಾಮದಲ್ಲಿ ಲಕ್ಷ್ಮೀದೇವಿ ದೇವಸ್ಥಾನದ ಅಡಿಗಲ್ಲು ಸಮಾರಂಭದಲ್ಲಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪೂಜೆ ನೆರವೇರಿಸಿದರು. ದರ್ಶನ ಪಾಟೀಲ, ಬಸಗೌಡ ಪಾಟೀಲ, ಸುರೇಶ ಚಿಟ್ನಿಸ್, ಶಂಕರ ಹಿಡದುಗ್ಗಿ, ಮಲ್ಲಿಕಾರ್ಜುನ ಕುಂದಿ, ರೋಹಿತ್ ಚಿಟ್ನಿಸ್, ದಿಗಂಬರ ನಾಯಿಕ ಇತರರಿದ್ದರು.
Published on

ಸಂಕೇಶ್ವರ, ಬೆಳಗಾವಿ: ಸಮಾಜ ಒಗ್ಗೂಡಿಸುವ ಶಕ್ತಿ ಧಾರ್ಮಿಕತೆಗಿದೆ ಎಂದು ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಗವನಾಳ ಗ್ರಾಮದಲ್ಲಿ ಲಕ್ಷ್ಮೀದೇವಿ ನೂತನ ದೇವಸ್ಥಾನಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇವರ ಮೇಲೆ ನಂಬಿಕೆ, ಭಕ್ತಿ ಇಟ್ಟು ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಲಕ್ಷ್ಮೀದೇವಿ ದೇವಸ್ಥಾನ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ದರ್ಶನ ಪಾಟೀಲ ಮಾತನಾಡಿ, ಒಟ್ಟು 80 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ಶಾಸಕ ಸತೀಶ ಜಾರಕಿಹೊಳಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರ ಅನುದಾನ ಹಾಗೂ ದಾನಿಗಳ ವಿಶೇಷ ನೆರವಿನಿಂದ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಹಿರಿಯರಾದ ಬಸಗೌಡ ಪಾಟೀಲ, ಸುರೇಶ ಚಿಟ್ನಿಸ್, ಶಂಕರ ಹಿಡದುಗ್ಗಿ, ಮಲ್ಲಿಕಾರ್ಜುನ ಕುಂದಿ, ಗ್ರಾಪಂ ಸದಸ್ಯ ರೋಹಿತ್ ಚಿಟ್ನಿಸ್, ಸಂಘದ ಉಪಾಧ್ಯಕ್ಷ ದಿಗಂಬರ ನಾಯಿಕ, ಕಾರ್ಯದರ್ಶಿ ಬಸವರಾಜ ಹಿಡದುಗ್ಗಿ, ಸದಸ್ಯರಾದ ಲಕ್ಷ್ಮಣ ಕುಂದಿ, ಸಂದೀಪ ಮಠಪತಿ, ಸತ್ಯನಾರಾಯಣ ಜಡಗಿ, ಸಂಜು ಹತ್ತರಕಿ, ಆನಂದ ಟೊಕಳೆ, ಸುನೀಲ ಬಡವಾಯಿ, ಲಗಮಣ್ಣ ಮಗದುಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net