ಧಾರ್ಮಿಕ ಕ್ಷೇತ್ರಗಳ ವಿರುದ್ಧ ದಬ್ಬಾಳಿಕೆ ನಿರಂತರ

23hos1p dharmasthala (1)
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಖಂಡಿಸಿ ಹೂಸನಗರದಲ್ಲಿ ಭಕ್ತರು ಪ್ರತಿಭಟನೆ ನಡೆಸಿದರು. ಮತ್ತಿಮನೆ ಸುಬ್ರಹ್ಮಣ್ಯ, ಚಂದ್ರವೌಳಿ, ಎನ್.ಆರ್. ದೇವಾನಂದ್, ವರ್ತೇಶ್, ನಾಗಪ್ಪ ಇತರರಿದ್ದರು.
Published on

ಹೊಸನಗರ: ಅನಾದಿ ಕಾಲದಿಂದಲೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ದಬ್ಬಾಳಿಕೆ ನಡೆಯುತ್ತಲೇ ಇದೆ. ಹಿಂದುಗಳು ಪೂಜಿಸುವ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಹೊಸನಗರದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಹಿಂದು ಮಹಾ ಧರ್ಮಸ್ಥಳ ಭಕ್ತಾದಿಗಳ ವೇದಿಕೆಯಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಕಳಂಕ ತಂದಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡನೀಯ. ಯಾರೇ ಅಪಪ್ರಚಾರ ಮಾಡಿದರೂ ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆ ಅವರಿಗೆ ಏನೂ ಹಾನಿ ಆಗುವುದಿಲ್ಲ. ಆದರೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತದೆ. ನಮ್ಮವರೇ ನಮ್ಮ ಧಾರ್ಮಿಕ ಕೇಂದ್ರಗಳ ಬಗ್ಗೆ ಅಪಪ್ರಚಾರಕ್ಕೆ ಇಳಿದಿರುವುದು ದುರದೃಷ್ಟ. ಹಿಂದು ಸಮಾಜವನ್ನು ನಾಶಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಹಿಂದುಗಳಾದ ನಾವು ಒಗ್ಗಟ್ಟಾಗಿ ಹಿಂದು ಧಾರ್ಮಿಕ ಕೇಂದ್ರಗಳನ್ನು ಉಳಿಸಬೇಕಿದೆ ಎಂದರು. ಸಭೆಗೂ ಮೊದಲು ಮಾವಿನಕೊಪ್ಪ ಶ್ರೀ ಗಂಗಾಧರೇಶ್ವರ ಸನ್ನಿಯಿಂದ ಮುಖ್ಯ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರವೌಳಿ, ಎನ್.ಆರ್. ದೇವಾನಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ವರ್ತೇಶ್, ಪಪಂ ಅಧ್ಯಕ್ಷ ನಾಗಪ್ಪ, ಪ್ರಮುಖರಾದ ಸುೀಂದ್ರ ಪಂಡಿತ್, ಮೋಹನ್ ಶೆಟ್ಟಿ, ವಿಜೇಂದ್ರ ಶೇಟ್, ಕೃಷ್ಣವೇಣಿ, ಹಾಲಗದ್ದೆ ಉಮೇಶ್, ಎನ್.ಶ್ರೀಧರ ಉಡುಪ, ನೇತ್ರಾ ಸುಬ್ರಾಯಭಟ್, ಎನ್.ಗಣೇಶ್, ಪ್ರವೀಣ್, ಸುರೇಶ ಸ್ವಾಮಿರಾವ್, ಆಲವಳ್ಳಿ ವೀರೇಶ್, ದೇವರಾಜ್, ಮಂಡಾನಿ ಮೋಹನ್, ಈಶ್ವರಪ್ಪ ಗೌಡ, ಮಿಲ್ ಈಶ್ವರಪ್ಪ ಗೌಡ, ಎಚ್.ಮಹಾಬಲ ಇತರರಿದ್ದರು.

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರನ್ನು ಜನರು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಧರ್ಮಸ್ಥಳದಲ್ಲಿ ಇರುವ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ ಸತ್ಯಕ್ಕೆ ಹೆಸರಾದ ದೇವರುಗಳು. ಈ ದೇವರುಗಳ ಬಗ್ಗೆ ಹಾಗೂ ಪವಿತ್ರ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಕಲಗೋಡು ರತ್ನಾಕರ್ , ಜಿಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net