

ಮಳಖೇಡ: ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಹೆಚ್ಚೆಚ್ಚು ನಡೆಸುವುದರಿಂದ ಸಾರ್ವಜನಿಕರ ಮಧ್ಯೆ ಭಾವೈಕ್ಯ ವೃದ್ಧಿಯಾಗಲು ಸಾಧ್ಯ ಎಂದು ತೋಟ್ನಳ್ಳಿ ಮತ್ತು ಸಂಗಾವಿಯ ಮಹಾಂತೇಶ್ವರ ಮಠದ ಪೀಠಾಧಿಕಾರಿ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು ಹೇಳಿದರು.
ಸಂಗಾವಿ(A) ಗ್ರಾಮದಲ್ಲಿ ಶ್ರಾವಣ ಸಮಾರೋಪ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಶ್ರೀ ಮಹಾಂತೇಶ್ವರ ಪಲ್ಲಕ್ಕಿ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಮನದ ಕಲ್ಮಶ ತೊಳೆದು ಹಾಕಲು ಅನುಭಾವದ ಜತೆಗೆ ಗುರುವಿನ ಆಶೀರ್ವಾದ ಬೇಕು ಎಂದರು.
ಎಪಿಎAಸಿ ಮಾಜಿ ಸದಸ್ಯ ರೇವಣಸಿದ್ದಪ್ಪ ಬಿ.ಆರ್.ಪಾಟೀಲ್, ತಾಪಂ ಮಾಜಿ ಸದಸ್ಯ ಚನ್ನಬಸ್ಸಪ್ಪ ಹಾಗರಗಿ, ಪ್ರಮುಖರಾದ ಗೌಡಪ್ಪಗೌಡ ಪಾಟೀಲ್, ಬಸವರಾಜ ಗದ್ವಾಲ್, ವೀರೇಶ ಶಾಸ್ತಿç, ಶಿವಯ್ಯ ಹಿರೇಮಠ, ಅರುಣ ಬಿರಾದಾರ, ಮಲ್ಲಯ್ಯ ಹಿರೇಮಠ, ಮಲ್ಲಣ್ಣಗೌಡ ಮಾಲಿಪಾಟೀಲ್, ನೀಲಕಂಠರಾವ ಹಾಗರಗಿ, ಶಿವಪುತ್ರಪ್ಪ ಹಾಗರಗಿ, ಸಿದ್ದಣ್ಣ ಜೋಗಾ, ಈರಣ್ಣ ಹಾಗರಗಿ, ರಾಜಪ್ಪ ತಳವಾರ, ಶಾಂತಪ್ಪ ಪೂಜಾರಿ, ನಬಿಸಾಬ್ ಫಕೀರ್, ರಾಜು ಸಂಗಾವಿ ಇತರರಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.