ಧಾರ್ಮಿಕ ಕಾರ್ಯಗಳಿಂದ ಬದುಕಿನ ಪರಿಚಯ

FEB 23-HRP-02,
Published on

ಹರಪನಹಳ್ಳಿ: ಹರಗಿಂತ ಗುರು ದೊಡ್ಡವನು. ತಾಯಿ ಮೊದಲ ಗುರುವಾಗಿದ್ದಾಳೆ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮಿಗಳು ತಿಳಿಸದರು.

ಮಹಾಶಿವರಾತ್ರಿ ಪ್ರಯುಕ್ತ ಹಾಲವರ್ತಿ ಮಠದಲ್ಲಿ ಇಷ್ಟಲಿಂಗ ಸಹಜ ಶಿವಾನುಭವಗೋಷ್ಠಿ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು.

ಮನುಷ್ಯನಲ್ಲಿ ಹೆಣ್ಣು ಮತ್ತು ಗಂಡು ಎಂಬ ಎರಡು ಜಾತಿಗಳಿದ್ದು, ರಾಜಕೀಯ ಪ್ರೇರಿತವಾಗಿ ಜಾತಿಗಳನ್ನು ಮಾಡಿಕೊಳ್ಳಲಾಗಿದೆ ಎಂದರು

ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯ ಕಳೆದರೆ ಶಾಂತಿ-ನೆಮ್ಮದಿ ಪ್ರಾಪ್ತಿಯಾಗುತ್ತದೆ. ದೇಹವೆಂಬುದು ಸುಂದರ ತೋಟವಿದ್ದಂತೆ. ಸಂಸಾರವೆಂಬ ಹೊಲದಲ್ಲಿ ಬಿತ್ತನೆ ನಡೆಸುವಾಗ ಹಲವಾರು ಅಡ್ಡಿಗಳು ಬರುತ್ತವೆ. ದೇವರು ಎಲ್ಲವನ್ನೂ ನಮಗೆ ನೀಡಿದ್ದಾನೆ. ನಮ್ಮದು ಎಂಬುದು ಇಲ್ಲಿ ಯಾವುದೂ ಇಲ್ಲ. ದೇವರ ಅನುಗ್ರಹದಿಂದ ನಾವು ಜನಿಸಿದ್ದೇವೆ. ದೇವರು ನೀಡಿರುವ ವಸ್ತುಗಳೊಂದಿಗೆ ಬದುಕನ್ನು ಸುಂದರವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ನೈಜ ಬದುಕಿನ ಪರಿಚಯವಾಗುತ್ತದೆ, ಮನಸ್ಸನ್ನು ಶುದ್ದವಾಗಿಟುಕೊಳ್ಳಲು ಶಬ್ದ, ಸ್ಪರ್ಶ, ರೂಪ, ರಸ, ಮೂಗು, ನಾಲಗೆ, ಕಿವಿಯನ್ನು ನಿಗ್ರಹದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ನಾವು ಜೀವನದಲ್ಲಿ ಯಾವುದನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಚನ್ನವೀರ ಸ್ವಾಮಿಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net