ಧಾರ್ಮಿಕ ಆಚರಣೆಗಳಿಂದ ಸಂಸ್ಕಾರ

6
Published on

ಇಟಗಿ: ಸಮಾಜಕ್ಕೆ ಉತ್ತಮ ಸಂಸ್ಕಾರ ದೊರೆಯಲು ಅರ್ಥಪೂರ್ಣ ಧಾರ್ಮಿಕ ಆಚರಣೆಗಳು ಅವಶ್ಯ ಎಂದು ಮುತ್ನಾಳ---&ಕೇದಾರ ಶಾಖಾ ಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ದೇವಿ ಪುರಾಣ ಮಂಗಲೋತ್ಸವದಲ್ಲಿ ಮಾತನಾಡಿದರು. ಚಿಕ್ಕಮುನವಳ್ಳಿ ಆರೂಢ ಮಠದ ಶಿವಪುತ್ರ ಸ್ವಾಮೀಜಿ ಮಾತನಾಡಿ, ನೆಮ್ಮದಿ ಬದುಕು ಸಾಗಿಸಲು ಆಧ್ಯಾತ್ಮದ ಅರಿವು ಅವಶ್ಯ ಎಂದರು.

ಜಿಪಂ ಮಾಜಿ ಸದಸ್ಯ ಶ್ರೀಕಾಂತ ಹಿರೇಮಠ ಮಾತನಾಡಿದರು. ಜಿಲ್ಲಾ ಸಹಕಾರಿ ಯುನಿಯನ್​ ಉಪಾಧ್ಯ ಸಂಜೀವ ಸೋನಪ್ಪನವರ, ಆದರ್ಶ ಶಿಕ ಪ್ರಶಸ್ತಿ ವಿಜೇತರಾದ ಮಹಾರುದ್ರ ಬೆಲವಾಡ, ಗಂಗಾಧರ ಬಡಿಗೇರ, ಸುಧಾ ಸಾಣಿಕೊಪ್ಪ ಹಾಗೂ ಕುಸ್ತಿಪಟುಗಳಾದ ಕಿರಣಕುಮಾರ ಹಂಪಣ್ಣವರ, ಕಾರ್ತಿಕ ತುರಮರಿ, ನಿವೃತ್ತ ಸೆನಿಕ ಮತ್ಯುಂಜಯ ಹಿರೇಮಠ ಹಾಗೂ ಭಜನಾ ಮಂಡಳಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಬಸವಂತಪ್ಪ ಕರಮಳನವರ, ಮುದ್ದಪ್ಪ ತುರಮರಿ, ವಿಜಯಕುಮಾರ ಸಾಣಿಕೊಪ್ಪ, ಈಶ್ವರ ಶೀಲಿ, ಸಂತೋಷ ಬಳಗಪ್ಪನವರ, ಬಾಬು ತುರಮರಿ, ಬಸವರಾಜ ಮಾರಿಹಾಳ, ಭರತೇಶ ಗಾಳಿ, ಶ್ರೀಕಾಂತ ಶಿರೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net