ಧಾರ್ಮಿಕ ಆಚರಣೆ ಸಂಸ್ಕೃತಿಯ ಪ್ರತೀಕ

21ITAGI1
ಗಂದಿಗವಾಡದಲ್ಲಿ ಗಣಪತಿ ದೇವಸ್ಥಾನದ ವಾಸ್ತುಶಾಂತಿ ಕಾರ್ಯಕ್ರಮ ಉದ್ಘಾಟಿಸಿ ಡಾ. ಸೋನಾಲಿ ಸರ್ನೋಬತ್ ಮಾತನಾಡಿದರು. ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ರಮೇಶ ಪಾತ್ರೋಟ ಗುರುಸ್ವಾಮಿ, ಮಲ್ಲವ್ವ ನಾಯ್ಕರ ಇತರರಿದ್ದರು.
Published on

ಇಟಗಿ: ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಡಾ.ಸೋನಾಲಿ ಸರ್ನೋಬತ್ ಹೇಳಿದರು. ಸಮೀಪದ ಗಂದಿಗವಾಡ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಗಣಪತಿ ದೇವಸ್ಥಾನದ ವಾಸ್ತುಶಾಂತಿ ಮತ್ತು ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಂಸ್ಕಾರವಂತ ಸಮಾಜಕ್ಕೆ ನಮ್ಮ ಸಂಸ್ಕೃತಿಯ ಕೊಡುಗೆ ಅಪಾರ. ಪಾಲಕರು ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಹಿರೇಮುನವಳ್ಳಿ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ರಮೇಶ ಪಾತ್ರೋಟ ಗುರುಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಲ್ಲವ್ವ ನಾಯ್ಕರ, ಉಪಾಧ್ಯಕ್ಷ ಮಹಾವೀರ ಹುಲಿಕವಿ, ಜಿಪಂ ಮಾಜಿ ಸದಸ್ಯ ಅರ್ಜುನ ಗಾಳಿ, ವಿಜಯ ಕುಲಕರ್ಣಿ, ಗಣಪತಿ ಮೂರ್ತಿ ದಾನಿ ರಮೇಶ ವೇರ್ಣೆಕರ, ಬಸವರಾಜ ಕುರೇರ, ಗಣಪತರಾಜ ಜೈನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net