

ಚಾಮರಾಜನಗರ : ಫೆಂಗಲ್ ಚಂಡ ಮಾರುತ ಎಫೆಕ್ಟ್ ಗಡಿ ಚಾಮರಾಜನಗರ ಜಿಲ್ಲೆಗೂ ತಟ್ಟಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಹನೂರು ತಾಲ್ಲೂಕಿನ ಪೊನ್ನಾಚಿ ಬಳಿ ಮನೆಯೊಂದು ಕುಸಿದಿದ್ದು, ಜಾನುವಾರು ಸಾವನ್ನಪ್ಪಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯ್ತಿ ಪರಿಮಿತಿಯ ಗೇರಟ್ಟಿ ಗ್ರಾಮದಲ್ಲಿ ನಾಗಮಾದಪ್ಪರವರ ಮನೆ ಕುಸಿದಿದ್ದು, ಅಲ್ಲಿದ್ದ ಜಾನುವಾರು ಸಾವನ್ನಪ್ಪಿದೆ.
ಕಡು ಬಡತನದಲ್ಲಿ ಜೀವನ ಸಾಗಿಸುವ ನಾಗಮಾದಪ್ಪರವರಿಗೆ ಇದೀಗ ದುಕ್ಕು ತೋಚದಂತಾಗಿದ್ದು, ಕೈಕೊಟ್ಟ ಬೆಳೆಯಿಂದ ಈಗಾಗಲೇ ಕಂಗಲಾಗಿರುವ ನಾಗಮಾದಪ್ಪರವರಿಗೆ ಮನೆ ಕುಸಿತಗೊಂಡು ಜಾನುವಾರು ಸಾವನ್ನಪ್ಪಿದ್ದರಿಂದ ಮುಂದಿನ ಜೀವನ ಹೇಗೆಂದು ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡುವ ಜೊತೆಗೆ ವಸತಿ ಸೌಕರ್ಯ ಕಲ್ಪಿಸಿಕೊಡಬೇಕಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.