ಧಾರಾಕಾರ ಮಳೆ: ರೈತರ ಬೆಳೆಯಲ್ಲ ನೀರು ಪಾಲು

ಧಾರಾಕಾರ ಮಳೆ: ರೈತರ ಬೆಳೆಯಲ್ಲ ನೀರು ಪಾಲು
Published on

ಹೊಳೆನರಸೀಪುರ : ಬುಧವಾರ ರಾತ್ರಿ ಧಾರಾಕಾರವಾಗಿ ಸುರಿದ ಅಪಾರ ಮಳೆಯಿಂದ ಕೆರೆಗಳು ತುಂಬಿ ಕೋಡಿಯಲ್ಲಿ ನೀರು  ಬೋರ್ಗೆರೆಯುತ ನುಗ್ಗಿದ  ಪರಿಣಾಮ ರೈತರ ಬೆಳೆಯಲ್ಲ ನೀರು ಪಾಲಾಗಿದೆ. ತಾಲೂಕಿನ ದೊಡ್ಡ ಕಾಡನೂರು ನಗರ್ತಿ ಒಳಗೊಂಡಂತೆ ಬಹುತೇಕ ತಾಲೂಕಿನ ಎಲ್ಲಾ ಗ್ರಾಮದ ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು ಅಧಿಕ ಪ್ರಮಾಣದಲ್ಲಿ ನೀರು ಹೊರ ಹರಿಯುತ್ತಿದೆ.

ಕೆರೆಯ ಕೋಡಿಯಿಂದ ಧಾರಾಕಾರವಾಗಿ ಮುನ್ನುಗ್ಗುತ್ತಿರುವ ನೀರು ಆಜುಬಾಜಿನ ರೈತರ ಜಮೀನುಗಳ ಮೇಲೆ ಗದಾ ಪ್ರಹಾರ ಮಾಡಿದೆ ಇದರಿಂದಾಗಿ ರೈತರ ಬೆಳೆಗಳೆಲ್ಲ ಮಣ್ಣು ಪಾಲಾಗಿವೆ.ದೊಡ್ಡ ಕಾಡನೂರಿನ ಕೆರೆಯ ಹಿಂಭಾಗ 30 ಎಕರೆ ಭತ್ತದ ಬೆಳೆ ಜೋಳ ನಿರುಪಾಲಾಗಿದೆ. ರೈತ ಬೆಳೆದ ಕೋಸು ಇತರೆ ತರಕಾರಿ ಬೆಳೆಗಳು ಮಣ್ಣು ಪಾಲಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಶ್ರವಣೂರು ಸಮೀಪ ಇರುವ ನಗರ್ತಿ ಗ್ರಾಮದ ಅಮಾನಿ ಕೆರೆಯ ಕೋಡಿ ಒಡೆದು ಭಾರಿ ಪ್ರಮಾಣದ ನೀರು ಹೊರ ನುಗ್ಗಿ  ಅಪಾರ ಪ್ರಮಾಣದ ಬೆಳೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ.

ಅಪಾರ ಮಳೆಯ ನೀರು ಭತ್ತ ಕಬ್ಬು   ಜೋಳ ಚಿಕ್ಕ ಅಡಿಕೆ ಸಸಿ ತೆಂಗಿನ ಸಸಿ ಇತರ ಬೆಳೆಗಳ ಮಾರಣಹೋಮ ಮಾಡಿದೆ . ಗ್ರಾಮೀಣ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಿಂದಾಗಿ ಕೆರೆ ಯಾವುದು ಜಮೀನ್ ಯಾವುದು ಎಂದು ಹುಡುಕುವಂತಾಗಿದೆ ಎಲ್ಲಿ ನೋಡಿದರೂ ನೀರೋ ನೀರು , ಇಷ್ಟೊಂದು ಅಗಾದ ಮಳೆಯ ನೀರಿನಿಂದಾಗಿ ರೈತ ಬಾಂಧವರು ಬೆಚ್ಚಿಬಿದ್ದಿದ್ದಾರೆ .

''ಎತ್ತ ನೋಡಿದರು ನೀರಿನ ಭೂರ್ಘರತ ಮುಗಿಲುಮುಟ್ಟುತ್ತಿದೆ. ಬೆಳೆಯಲ್ಲ ಹಾಳಾಗಿ ಹೋಯಿತೆಂದು ಮುಗಿಲ ಮೇಲೆ ಮುಖ ಮಾಡಿ ರೈತ ಬಾಂಧವರು ಅಳಲನ್ನು ತೋಡಿಕೊಂದಿದ್ದಾರೆ.ಕೆರೆಯ  ಕೋಡಿಯಿಂದ ಭಾರೀ ನೀರು ಹರಿಯುತ್ತಿರುವುದರಿಂದ ಬೆಳೆದ ಕೊಸು ಬೆಳೆ ಮಣ್ಣು ಪಾಲಾಗಿದ್ದು ನನ್ನ ಸಾಲ ತೀರಿಸುವುದಾದರೂ ಹೇಗೆಂಬುವುದು ಗೊತ್ತಾಗುತ್ತಿಲ್ಲ ಇದರಿಂದ ನನಗೆ ಭಾರಿ ನಷ್ಟವಾಗಿದೆ''

ದೊಡ್ಡ ಕಾಡನೂರು ಗ್ರಾಮದ ರೈತ   ಶಿವಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net