ರಿಪ್ಪನ್‌ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಸೋಮವಾರ ರಾತ್ರಿ ಒಂದೂವರೆ ಗಂಟೆಗೂ ಅಧಿಕ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು. ಮಳೆಯ ರಭಸಕ್ಕೆ ಹಲವೆಡೆ ಹಳ್ಳಕೊಳ್ಳಗಳು ಕೋಡಿಬಿದ್ದು ಹೊಲ, ಗದ್ದೆ, ತೋಟ, ಕೃಷಿ ಜಮೀನು ಹಾಗೂ ರಸ್ತೆಗಳನ್ನು ಕೊಚ್ಚಿಕೊಂಡು ಹೋಗಿವೆ.