ಧಾರವಾಡದ ಮೂವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ

16 Dwd 1B Fakkirappa Netri
Published on

ಧಾರವಾಡ: ಬಾಗಲಕೋಟೆಯಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿಯು ೨೦೨೧ ಹಾಗೂ ೨೦೨೨ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಜಿಲ್ಲೆಯ ಮೂವರು ಕಲಾವಿದರು ಭಾಜನರಾಗಿದ್ದಾರೆ.
ದೊಡ್ಡಾಟ ಕಲಾವಿದ ಚಂದ್ರಶೇಖರಯ್ಯ ಗುರಯ್ಯನವರಗೆ ೨೦೨೧ನೇ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಇದು ೨೫,೦೦೦ ರೂ. ನಗದು ಒಳಗೊಂಡಿದೆ.
ಸಣ್ಣಾಟ ಕಲಾವಿದ ಸುರೇಂದ್ರ ಹುಲ್ಲಂಬಿ ಹಾಗೂ ದೊಡ್ಡಾಟ ಕಲಾವಿದ ಫಕ್ಕೀರಪ್ಪ ನೆರ್ತಿ ಅವರು ೨೦೨೨ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ೫೦,೦೦೦ ರೂ. ನಗದು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net