ಧಾರವಾಡ, ನವಲಗುಂದ, ಕಲಘಟಗಿ, ಪ್ರತಿಭಟನೆ

5 NLG 1- Protest
Published on

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ಉಪನಗರ ಪೊಲೀಸ್ ಠಾಣೆಗೆ ಕರೆತಂದ ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಶಾಸಕಿ ಕುಸುಮಾ ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಬಾಪುಗೌಡ ಪಾಟೀಲ, ನಾಗರಾಜ ಛಬ್ಬಿ ಸೇರಿದಂತೆ ಅನೇಕ ನಾಯಕರ ನೇತೃತ್ವದಲ್ಲಿ ಮಹಿಳಾ ಘಟಕ ಸೇರಿ ನೂರಾರು ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.

ಸಂಜೆ ಹೊತ್ತಿಗೆ ವಿನಯ ಕುಲಕರ್ಣಿ ಅವರನ್ನು ಬಂಧಿಸಿ ಆರೋಗ್ಯ ತಪಾಸಣೆಗೆ ಕರೆದೊಯ್ಯಲಿದ್ದಾರೆ ಎಂಬ ಮಾಹಿತಿ ತಿಳಿದು ಠಾಣೆ ಎದುರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಘೊಷಣೆ ಕೂಗಿ ಆಕ್ರೋಶ ಹೊರ ಹಾಕಿದರಲ್ಲದೆ, ವಿಕೆ..ವಿಕೆ..ವಿಕೆ.. ಎಂದು ಘೊಷಣೆ ಕೂಗಿದರು. ವಿನಯ ಕುಲಕರ್ಣಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರನ್ನು ನೋಡಲು ಕಾರ್ಯಕರ್ತರು ಮುಗಿ ಬಿದ್ದಿದ್ದರು. ಆದರೆ, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಠಾಣೆ ಎದುರು ಬಿಗಿ ಭದ್ರತೆ ಕೈಗೊಂಡಿದ್ದರು. ಇದಾದ ಬಳಿಕ ಠಾಣೆ ಎದುರಿನ ರಸ್ತೆಯಲ್ಲೇ ಚಪ್ಪಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನ್ಯಾಯಾಲಯ ಎದುರು ಸಹ ಪ್ರತಿಭಟನೆ ನಡೆಸಿದರು.

ಕಲಘಟಗಿಯಲ್ಲಿ ಮನವಿ: ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಶಂಕರಗಿರಿ ಬಾವನವರ, ಶಂಕರಗೌಡ್ರ ಭರಮಗೌಡ್ರ, ಶಿವಲಿಂಗ ಮೂಗಣ್ಣವರ, ಗುರು ಬೆಂಗೇರಿ, ಲಿಂಗರೆಡ್ಡಿ ನಡುವಿನಮನಿ, ಗಿರೀಶ ಸೂರ್ಯವಂಶಿ, ಸುಭಾಸಗೌಡ ಪಾಟೀಲ, ಚನ್ನಯ್ಯ ಚಿಕ್ಕಮಠ, ಮಂಜುಳಾ ದೇವಲಾಪೂರ, ಕಲ್ಲಪ್ಪ ವೀರಾಪೂರ, ಶಿವಪುತ್ರಪ್ಪ ಆಲದಕಟ್ಟಿ, ಮಂಜುನಾಥ ಚಂಡೂನವರ, ಮಹೇಶ ಅಲಗೂರ, ಸೈಯದ ಪಾಟೀಲ ಇತರರಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ನವಲಗುಂದ ಪಟ್ಟಣದ ಲಿಂಗರಾಜ ವೃತ್ತದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ಹಿರೇಗೌಡ್ರ, ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಸದು ಗೌಡ ಪಾಟೀಲ, ಬಸವರಾಜ ಶಲವಡಿ, ಉಸ್ಮಾನ್ ಬಬರ್ಚಿ, ಶಿವಾನಂದ ತಡಸಿ, ಈರಣ್ಣ ಶಿಡಗಂಟಿ, ಬಡೇಸಾಬ್ ದೇವರಿಡು, ಪುರಸಭೆ ನೂತನ ಅಧ್ಯಕ್ಷ ಮಂಜುನಾಥ ಜಾಧವ, ಉಪಾಧ್ಯಕ್ಷೆ ಖೈರುಣಬಿ ನಾಶಿಪುಡಿ, ನಾಗರಾಜ ಭಜಂತ್ರಿ, ರುದ್ರಗೌಡ ಸರನಾಡಗೌಡ್ರ, ಅಶೋಕ ಮರಕುಂಬಿ, ಹನುಮಂತಪ್ಪ ಚಿಕ್ಕಣ್ಣವರ, ಬಸವರಾಜ ನರಗುಂದ, ಶಿವಾನಂದ ಚಲವಾದಿ ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net