ಧಾರವಾಡ ಜಿಲ್ಲೆಯಲ್ಲಿ 56 ಕರೊನಾ ಪ್ರಕರಣ

carona logo
Published on

ಧಾರವಾಡ: ಜಿಲ್ಲೆಯಲ್ಲಿ ನಿತ್ಯವೂ 200ರ ಗಡಿ ದಾಟುತ್ತಿದ್ದ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಂಗಳವಾರ ಇಳಿಮುಖವಾಗಿದ್ದು, ಕೇವಲ 56 ಪ್ರಕರಣಗಳು ದಾಖಲಾಗಿದೆ. ಆದರೆ, ವಾಸ್ತವ ಬೇರೆ ಇದೆ; ಅರೋಗ್ಯ ಇಲಾಖೆಯವರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ವಿಷಯದಲ್ಲಿ ಮುಷ್ಕರ ಘೊಷಿಸಿರುವುದರಿಂದ ನಿಖರ ಸಂಖ್ಯೆ ಹೊರಬಂದಿಲ್ಲ ಎಂಬ ಮಾತು ಕೇಳಿಬಂದಿದೆ.

ಮುಷ್ಕರ ಆರಂಭಕ್ಕೂ ಮುನ್ನ ಸರ್ಕಾರಕ್ಕೆ ನೀಡಿರುವ ವರದಿ ಮೇಲೆ ಮಂಗಳವಾರದ ಕರೊನಾ ಮಾಹಿತಿ ಕೋಷ್ಟಕ ಬಿಡುಗಡೆ ಮಾಡಲಾಗಿದೆ. ಅದರಂತೆ, ಒಟ್ಟು ಪ್ರಕರಣಗಳ ಸಂಖ್ಯೆ 14,590ಕ್ಕೇರಿದ್ದು, ಈವರೆಗೆ 11972 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2187ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 431 ಜನ ಮೃತಪಟ್ಟಿದ್ದಾರೆ. ಉಳಿದಂತೆ ಜಿಲ್ಲೆಯ ಯಾವ ಪ್ರದೇಶದಲ್ಲಿ, ಎಷ್ಟು ಜನರಿಗೆ ಕರೊನಾ ಸೋಂಕು ತಗುಲಿದೆ ಎಂಬ ಮಾಹಿತಿಯನ್ನು ಸಹ ಇಲಾಖೆಯಿಂದ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಬುಲೆಟಿನ್ ಸಹ ಬಿಡುಗಡೆ ಮಾಡಲಾಗಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net