

ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಕೇವಲ 29 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13021ಕ್ಕೆ ಏರಿದೆ. ಇದುವರೆಗೆ 10,228 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2413 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 356 ಜನ ಮೃತಪಟ್ಟಿದ್ದಾರೆ.
ಧಾರವಾಡ ತಾಲೂಕು: ಹೆಬ್ಬಳ್ಳಿ ಗ್ರಾಮ, ಮಣಕಿಲ್ಲಾ ಕುಂಬಾರ ಓಣಿ, ಎಂ.ಆರ್. ನಗರ, ಯಾಲಕ್ಕಿ ಶೆಟ್ಟರ್ ಕಾಲನಿ, ಸಾರಸ್ವತಪುರ, ಸತ್ತೂರಿನ ಎಸ್ಡಿಎಂ ಆಸ್ಪತ್ರೆ, ಟ್ರೖೆನಿಂಗ್ ಕಾಲೇಜು ರಸ್ತೆ; ಹುಬ್ಬಳ್ಳಿ ತಾಲೂಕಿನ ಮಂಜುನಾಥ ನಗರ, ನವನಗರ, ಸಿದ್ಧೇಶ್ವರ ಪಾರ್ಕ್, ಮಂಟೂರ, ಹೆಬಸೂರ, ಗೋಕುಲ ರಸ್ತೆಯ ತೋಳನಕೆರೆ ಬಳಿ, ವಿದ್ಯಾನಗರ, ಸಾಯಿನಗರ, ಶ್ರೀನಿಧಿ ಕಾಲನಿ, ಶಿರಡಿ ನಗರದಲ್ಲಿ ಕರೊನಾ ಸೋಂಕಿತರು ಕಂಡುಬಂದಿದ್ದಾರೆ.
ಕಲಘಟಗಿ ತಾಲೂಕಿನ ಶೀಗಿಗಟ್ಟಿ; ಕುಂದಗೋಳ ತಾಲೂಕಿನ ನೀಲಗುಂದ, ಅಲ್ಲಾಪುರ ಹನುಮಂತ ಗುಡಿ ಹತ್ತಿರ, ಬಾಳಿತೋಟದ ಓಣಿಯಲ್ಲಿ ಪ್ರಕರಣ ಪತ್ತೆಯಾಗಿವೆ.