ಧಾರವಾಡ ಜಿಲ್ಲೆಯಲ್ಲಿ 268 ಹೊಸ ಪ್ರಕರಣ ಪತ್ತೆ

carona logo
Published on

ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 268 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 7,651ಕ್ಕೇರಿದೆ. 200 ಜನರಿಗೆ ಆರಾಮಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದ, ಕರೊನಾ ಗೆದ್ದು ಚೇತರಿಸಿಕೊಂಡಿರುವವರ ಸಂಖ್ಯೆ 4,841ಕ್ಕೆ ಏರಿದೆ.

ಸದ್ಯ 2,576 ಪ್ರಕರಣಗಳು ಸಕ್ರಿಯವಾಗಿವೆ. 36 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮತ್ತೆ ಐವರು ಮೃತಪಟ್ಟಿದ್ದಾರೆ. ಇದರಿಂದಾಗಿ, ಕರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 234ಕ್ಕೆ ಏರಿದೆ.

ಭಾನುವಾರ ಪ್ರಕಟಗೊಂಡ ಪ್ರಕರಣಗಳಲ್ಲಿ ಹುಬ್ಬಳ್ಳಿ ನಗರ ಹಾಗೂ ಗ್ರಾಮಾಂತರ ಸೇರಿ 75 ಪ್ರದೇಶಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹುಬ್ಬಳ್ಳಿ ನಗರದ್ದೇ ಸಿಂಹಪಾಲು. ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ 40 ಪ್ರದೇಶಗಳಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಕೆಲ ಪ್ರದೇಶಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮ, ದುಮ್ಮವಾಡ ಕೆಂಪಗೇರಿ ಓಣಿ, ಸಿದ್ಧಾರೂಢ ಮಠ ಬಳಿ; ನವಲಗುಂದ ತಾಲೂಕಿನ ಕುರಬರ ಓಣಿ, ಬಲ್ಲರವಾಡ, ಅರೇಕುರಹಟ್ಟಿ, ಕಲ್ಲೂರ ದಂಡಿನ ಓಣಿ, ಕಾಲವಾಡ, ಹಳೆಬೆನಕಪುರ; ಕುಂದಗೋಳ ತಾಲೂಕಿನ ಶೆರೆವಾಡ ಗುಡಿ ಓಣಿ, ಹಂಚಿನಾಳ ಗ್ರಾಮದ ಬಸವೇಶ್ವರ ದೇವಾಲಯ ಹತ್ತಿರ, ಕುಬಿಹಾಳ, ರೊಟ್ಟಿಗವಾಡದ ವೀರಭದ್ರೇಶ್ವರ ಗುಡಿ ಹತ್ತಿರ, ಸಂಶಿ ಗ್ರಾಮದ ಗೌಡರ್ ಓಣಿ, ಹನುಮಾನ್ ಮಂದಿರ ಬಳಿ, ಬಸ್ ನಿಲ್ದಾಣ, ಕೊಡ್ಲಿವಾಡ, ಕಮಡೊಳ್ಳಿ; ಅಣ್ಣಿಗೇರಿಯ ಮಣಕವಾಡ, ಶಿಶ್ವಿನಹಳ್ಳಿಯಲ್ಲಿ ಪ್ರಕರಣಗಳು ಪತ್ತೆಯಾಗಿವೆ.

ಇನ್ನು ಅನ್ಯ ಜಿಲ್ಲೆಗಳಾದ ಗದಗ ಜಿಲ್ಲೆ ರೋಣ ತಾಲೂಕ ಜಕ್ಕಲಿ, ಬಾಗಲಕೋಟ ಜಿಲ್ಲೆ ಹುನಗುಂದ, ಬೆಳಗಾವಿ ಜಿಲ್ಲೆ ಸವದತ್ತಿ, ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹೊಸೂರ, ಯಾಲಕ್ಕಿ ಓಣಿ, ಸವಣೂರು, ಬ್ಯಾಡಗಿ ಹಿರೇಹಳ್ಳಿ, ಉ.ಕ. ಜಿಲ್ಲೆ ಮುಂಡಗೋಡ ಚೌಡಿಹಾಳದಲ್ಲಿ ಸೋಂಕಿತರು ಪತ್ತೆಯಾಗಿದ್ದು, ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಸ್ಯಾನಿಟೈಸೇಷನ್: ಹುಬ್ಬಳ್ಳಿ: ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಭಾನುವಾರ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಎಲ್ಲ ಬಸ್ ನಿಲ್ದಾಣಗಳಲ್ಲಿ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಿ ಸ್ಯಾನಿಟೈಸೇಷನ್ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಕರೊನಾದಿಂದಾಗಿ ಸಾರಿಗೆ ಸಂಸ್ಥೆಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಜತೆಗೆ ಎಡೆಬಿಡದೆ ಕಾಡುತ್ತಿರುವ ಮಳೆ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಶ್ರಾವಣ ಶುಕ್ರವಾರ (ಆ.14), ಸ್ವಾತಂತ್ರ್ಯ ದಿನಾಚರಣೆ ಮತ್ತು ಭಾನುವಾರದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಿ ಅಲ್ಪ ಮಟ್ಟಿಗೆ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇತ್ತು. ಆದರೆ, ನಿರಂತರ ಮಳೆಯಿಂದ ಜನರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಇದರಿಂದ ಸಂಸ್ಥೆಯ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net