

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ 204 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 9666ಕ್ಕೇರಿದ್ದು, ಈವರೆಗೆ 6977 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2408 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರೊನಾದಿಂದ ಮತ್ತೆ 8 ಜನ ಮೃತಪಟ್ಟಿದ್ದಾರೆ. ಇದರಿಂದಾಗಿ, ಸಾವಿಗೀಡಾದವರ ಸಂಖ್ಯೆ 281ಕ್ಕೆ ಜಿಗಿದಿದೆ.
ಮಂಗಳವಾರ ಪ್ರಕಟವಾದ ಪ್ರಯೋಗಾಲಯದ ವರದಿಯಲ್ಲಿಯೂ ಇತ್ತೀಚಿನ ದಿನಗಳಂತೆ ಹುಬ್ಬಳ್ಳಿಯಲ್ಲೇ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ ಸುಮಾರು 55 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ ಸುಮಾರು 30 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.
ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ಹುಲಿಕಟ್ಟಿ; ನವಲಗುಂದದ ಅಮರಗೋಳ, ಯಮನೂರ ಗ್ರಾಮದ ಬನಶಂಕರಿ ಹೋಟೆಲ್ ಬಳಿ, ನವಲಗುಂದ ಓಣಿ, ಬಸ್ತಿ ಪ್ಲಾಟ್, ಗುಮ್ಮಗೋಳ; ಕುಂದಗೋಳದ ಕಮಡೊಳ್ಳಿ, ಸಾಲಿಯವರ ಪ್ಲಾಟ್, ಹಿರೇಹರಕುಣಿ ಮ್ಯಾಗೇರಿ ಓಣಿ, ದೇಶಪಾಂಡೆ ಓಣಿ, ಮತ್ತಿಗಟ್ಟಿ ಹಿರೇಮಠ ಓಣಿ, ಕುರಬರ ಓಣಿ; ಅಣ್ಣಿಗೇರಿಯಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಸುತ್ತಮುತ್ತಲಿನ ಜಿಲ್ಲೆಗಳ ಹತ್ತಾರು ಪ್ರಕರಣಗಳು ಧಾರವಾಡ ಜಿಲ್ಲೆ ಆಸ್ಪತ್ರೆಗಳಿಗೆ ದಾಖಲಾಗಿವೆ.