

ರಿಪ್ಪನ್‌ಪೇಟೆ: ಭಕ್ತಿಯಿಂದ ಸಲ್ಲಿಸುವ ಪೂಜೆಯಿಂದ ವಿಕೃತ ಭಾವನೆಗಳು ನಿವಾರಣೆಯಾಗುತ್ತವೆ. ಧರ್ಮಾಚರಣೆ ಸುಕೃತ ಫಲ ನೀಡುವುದು ಎಂದು ಹೊಂಬುಜ ಕ್ಷೇತ್ರದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಹೊಂಬುಜ ಜೈನ ಮಠದಲ್ಲಿ ಆಯೋಜಿಸಿದ್ದ ಶೋಡಷೋಪಚಾರ ಪೂಜೆಯಲ್ಲಿ ಆಶೀರ್ವಚನ ನೀಡಿದ ಅವರು, ಧಾರ್ಮಿಕ ಆಚರಣೆಗಳು ಶ್ರೇಷ್ಠವಾದುದು ಎಂದು ತಿಳಿಸಿದರು. ನೇಮಿನಾಥ ಸ್ವಾಮಿ, ಮಹಾವೀರ ಸ್ವಾಮಿ, ಅದಿನಾಥ ಸ್ವಾಮಿ, ಸರಸ್ವತಿದೇವಿ, ಕೂಷ್ಮಾಂಡಿನಿ ದೇವಿ, ಕ್ಷೇತ್ರಪಾಲ ಸ್ವಾಮಿ ಸನ್ನಿಯಲ್ಲಿ ಪೂಜೆ ಸಲ್ಲಿಸಲಾಯಿತು. ಸಹ ಅರ್ಚಕ ಪದ್ಮರಾಜ ಇಂದ್ರ ಪೂಜೆ ನೆರವೇರಿಸಿದರು. ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದರು.