ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಭಕ್ತರು

24ark1
Published on

ಅರಕಲಗೂಡು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ತಾಲೂಕು ಮಾರ್ಗವಾಗಿ ನೂರಾರು ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದಾರೆ.

ಬೆಂಗಳೂರು, ಹೊಸಕೋಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಕುಣಿಗಲ್ ಭಾಗದ ನೂರಾರು ಯಾತ್ರಾರ್ಥಿಗಳು ಪಾದಯಾತ್ರೆ ಹೊರಟಿದ್ದಾರೆ. ಧರ್ಮಸ್ಥಳಕ್ಕೆ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಮಾರ್ಗ ಹತ್ತಿರದ ದಾರಿಯಾದ ಕಾರಣ ಬಹುತೇಕ ಯಾತ್ರಾರ್ಥಿಗಳು ಪ್ರತಿವರ್ಷ ಈ ಮಾರ್ಗದಲ್ಲೇ ಸಾಗುತ್ತಾರೆ. ಈ ಬಾರಿಯೂ ಸಹ ಮಹಿಳೆಯರು, ವೃದ್ಧರು ಇದೇ ಮಾರ್ಗವನ್ನು ಅವಲಂಬಿಸಿದ್ದು, ತಂಡೋಪ ತಂಡವಾಗಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.

ಪಾದಯಾತ್ರಿಗಳಿಗೆ ದಾನಿಗಳು ಅಲ್ಲಲ್ಲಿ ಮಾರ್ಗ ಮಧ್ಯೆ ತಂಪು ಪಾನೀಯಗಳು, ಉಪಹಾರ ನೀಡಿ ಸತ್ಕರಿಸಿ ಮುಂದೆ ಕಳುಹಿಸುತ್ತಿದ್ದಾರೆ. ನಾವು ಧರ್ಮಸ್ಥಳ ಮಂಜುನಾಥಸ್ವಾಮಿ ಭಕ್ತರಾಗಿದ್ದ ಕಳೆದ ಎರಡು ವರ್ಷಗಳಿಂದ ಇದೇ ಮಾರ್ಗವಾಗಿ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಹೊಸಕೋಟೆ ಬಸವರಾಜು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net