ಧರ್ಮಸ್ಥಳಕ್ಕೆ ಪಾದಯಾತ್ರಿಗಳಿಗೆ ಸಾಲುಮರದ ತಿಮ್ಮಕ್ಕಕುಟುಂಬದಿಂದ ದಾಸೋಹ ವ್ಯವಸ್ಥೆ

ಧರ್ಮಸ್ಥಳಕ್ಕೆ ಪಾದಯಾತ್ರಿಗಳಿಗೆ ಸಾಲುಮರದ ತಿಮ್ಮಕ್ಕಕುಟುಂಬದಿಂದ ದಾಸೋಹ ವ್ಯವಸ್ಥೆ
Published on

ಬೇಲೂರು: ಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿರುವ ಸಾವಿರಾರು ಭಕ್ತರಿಗೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಹಾಗೂ ಪುತ್ರ ಬಳ್ಳೂರು ಉಮೇಶ್ ಕುಟುಂಬದಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.


ಪ್ರತಿ ವರ್ಷದಂತೆ ಈ ವರ್ಷವೂ ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಶನ್ ಪದಾಧಿಕಾರಿಗಳು ಶಿವರಾತ್ರಿಗೆಂದು ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳಿಗೆ ಬಳ್ಳೂರು ಗ್ರಾಮದ ಬಸ್ ನಿಲ್ದಾಣ ಸಮೀಪ ದಾಸೋಹದೊಂದಿಗೆ ಹಣ್ಣು ಹಂಪಲುಗಳನ್ನು ಸ್ವತಃ ಸಾಲುಮರದ ತಿಮ್ಮಕ್ಕನವರೇ ಭಕ್ತರಿಗೆ ಆಹಾರ ಬಡಿಸಿದ್ದು ವಿಶೇಷವಾಗಿತ್ತು.. ತಿಮ್ಮಕ್ಕನವರನ್ನು ಕಂಡು ಹರ್ಷ ವ್ಯಕ್ತಪಡಿಸಿದ ಪಾದ ಯಾತ್ರೆಗಳು ಸೆಲ್ಫಿ ಫೋಟೋ ತೆಗೆಸಿಕೊಂಡು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.


ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಮಾತನಾಡಿ, ಪ್ರತಿ ವರ್ಷ ಸಾಲು ಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಪೌಂಡೇಶನ್‌ನಿಂದ ಪಾದಯಾತ್ರಿಗಳಿಗೆ ಆತಿಥ್ಯ ನೀಡಲಾಗುತಿತ್ತು. ಅದರಂತೆ ಈ ಬಾರಿಯೂ ಕೂಡ ಶುಚಿ ರುಚಿಯಾದ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಭಕ್ತರು ಸುಖಕರವಾಗಿ ಪ್ರಯಾಣ ಮುಗಿಸಲಿ ಎಂದರು.


ಪ್ರಭಾವತಿ ನಾಗೇಶ್ ಹಾಗೂ ಉಮೇಶ್ ಕುಟುಂಬದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net