ಧರ್ಮಸ್ಥಳ ಸಂಸ್ಥೆಯಿಂದ ಸೌಲಭ್ಯದ ಭರವಸೆ

12-kkr2(7-23
ಕಿಕ್ಕೇರಿ ಕೆಪಿಎಸ್ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಿಸಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಧಿಕಾರಿಗಳು ಚರ್ಚಿಸಿದರು. ವೀರೇಶಪ್ಪ, ವಿನೋದ್‌ಸಿಂಗ್, ಬಸವರಾಜಪ್ಪ ಮತ್ತಿತರರಿದ್ದರು.
Published on

ಕಿಕ್ಕೇರಿ: ವಿದ್ಯಾರ್ಥಿಗಳ ಅನುಕೂಲಕ್ಕೆ ಶುದ್ಧ ನೀರು ಘಟಕವನ್ನು ನೀಡಲು ಧರ್ಮಸ್ಥಳ ಸಂಸ್ಥೆ ಬದ್ಧವಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಎಂ. ವೀರೇಶಪ್ಪ ಭರವಸೆ ನೀಡಿದರು.

ಪಟ್ಟಣದ ಕೆಪಿಎಸ್ ಶಾಲೆಗೆ ಯೋಜನೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಾಂಶುಪಾಲರೊಂದಿಗೆ ಚರ್ಚಿಸಿದ ಅವರು, ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕವಾಗಿ ಪೂರಕ ವಾತಾವರಣ ಕಲ್ಪಿಸಲು ಸಂಸ್ಥೆ ಬದ್ಧವಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ 250 ಲೀ. ಸಾಮರ್ಥ್ಯದ 2 ಘಟಕವನ್ನು ತ್ವರಿತವಾಗಿ ವ್ಯವಸ್ಥೆ ಮಾಡಲಾಗುವುದು. ಉತ್ತಮ ಪರಿಸರದಲ್ಲಿರುವ ಸರ್ಕಾರಿ ಕೆಪಿಎಸ್ ಶಾಲೆ ಮಾದರಿಯಾಗಬೇಕು. ಸಂಸ್ಥೆ ವತಿಯಿಂದ ಮತ್ತಷ್ಟು ಪೂರಕವಾದ ಸೌಲಭ್ಯಗಳನ್ನು ನೀಡಲು ಬದ್ಧವಿದ್ದು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಸಂಸ್ಥೆ ಮೇಲ್ವಿಚಾರಕಿ ರೇಣುಕಾ, ಪ್ರಾಂಶುಪಾಲ ಎಲ್.ವಿನೋದ್‌ಸಿಂಗ್, ಉಪಪ್ರಾಂಶುಪಾಲ ಬಸವರಾಜಪ್ಪ, ಬೋಧಕ ವೃಂದದ ಎಸ್.ಎಂ. ಬಸವರಾಜು, ದೊರೆಸ್ವಾಮಿ, ಕುಮಾರಸ್ವಾಮಿ, ನಾಗೇಶ್, ರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net